ಬಂಟ್ವಾಳ : ಇರಾ ಗ್ರಾಮ ಪಂಚಾಯತ್ 2022-23ನೇ ಸಾಲಿನ ದ್ವೀತಿಯ ಹಂತದ ಗ್ರಾಮ ಸಭೆಯು ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ – ಕಲ್ಲಾಡಿ ಸಭಾಭವನದಲ್ಲಿ ನಡೆಯಿತು.
ಗ್ರಾಮಸಭೆಯ ಅಧ್ಯಕ್ಷತೆಯನ್ನು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿಸೋಜ ವಹಿಸಿದ್ದರು. ನೊಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುನೀತ ಕುಮಾರಿಯವರು ನಿರ್ವಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಮೊಯಿದಿನ್ ಕುಂಞಿ, ಸದಸ್ಯರಾದ ಅಬ್ದುಲ್ ರಝಾಕ್ ಕುಕ್ಕಾಜೆ, ನಿರ್ಮಲ ರೇಣುಕಾ, ನಳಿನಾಕ್ಷಿ, ಮಹಮ್ಮದ್, ಚಂದ್ರಪ್ರಭಾ, ಕೆ.ಪ್ರತಾಪ್ ಚಂದ್ರ, ಯಾಕೂಬ್, ಬಾನುರೇಖಾ.ವೈ. ಶೆಟ್ಟಿ, ರಮೇಶ್. ಎಸ್.ಪೂಜಾರಿ,ಅಬ್ದುಲ್ ಹಮೀದ್, ವಾಣಿಶ್ರೀ, ಪುಷ್ಪಲತಾ.ಸಿ.ಕರ್ಕೇರಾ, ಬಂಟ್ವಾಳ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಸ್ಥಿತರಿದ್ದರು.
ಕೃಷಿ ಇಲಾಖೆ, ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಪ್ರಬಾರ ಪಂಚಾಯತ್ ಅಧಿಕಾರಿ ಶ್ರೀಕಾಂತ್ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್ ಕುಮಾರ್ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.