ಬಂಟ್ವಾಳ : ಮಂಚಿ ಸಾವಿರದ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಮಾಡದ ಜಾತ್ರಾ ಸಂದರ್ಭ ಶಾಸಕ ರಾಜೇಶ್ ನಾಯಕ್ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡರವರ ಅನುದಾನದಲ್ಲಿ ಶೌಚಾಲಯ, ಶಾಸಕರ ಶಿಫಾರಸು ಮೇರೆಗೆ ಆದ ಕುಡಿಯುವ ನೀರಿನ ಕೊಳವೆ ಬಾವಿ ಉದ್ಘಾಟಿಸಿದರು.
ಈ ಸಂದರ್ಭ ಮಾಡದ ಆಡಳಿತ ಮೊಕ್ತೇಸರರಾದ ಜಗದೀಶ ರಾವ್ ಪತ್ತುಮುಡಿ, ಸೇವಾ ಸಮಿತಿ ಅಧ್ಯಕ್ಷರಾದ ವಿಠಲ ರೈ ಬಾಲಾಜಿ ಬೈಲು, ಮಂಚಿ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್ ಕಾಮತ್ , ಮಂಚಿ ಮಾಡದ ಗಡಿ ಪ್ರಧಾನರಾದ ರವಿ ಶೆಟ್ಟಿ ಯಾನೆ ಸಾರಾಳ ಕುಂಞಳ ಮಂಚಿ ಗೋಪಾಲ ಕೃಷ್ಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಮಂಚಿ ಬಾವ, ಬಾಲಕೃಷ್ಣ ಶೆಟ್ಟಿ ಟಿ ಎಸ್ ಟಿಂಬರ್ಸ್ ಕಲ್ಲಡ್ಕ ಉಪಸ್ಥಿತರಿದ್ದರು. ಪುಷ್ಪರಾಜ್ ಕುಕ್ಕಾಜೆ ಪ್ರಾಸ್ತಾವಿಕ ಮಾತನಾಡಿದರು. ರಮೇಶ್ ರಾವ್ ಸ್ವಾಗತಿಸಿ, ಮಂಚಿ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಪುದ್ದೋಟು ವಂದಿಸಿದರು. ಮೇರಾವು ಉಮಾನಾಥ ರೈ ಕಾರ್ಯಕ್ರಮ ನಿರೂಪಿಸಿದರು.