ಬಂಟ್ವಾಳ: ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿ ಮತ್ತು ಕರ್ಲ ಕಾರ್ಯ ಕ್ಷೇತ್ರದ ಒಕ್ಕೂಟಗಳ ತ್ರೈಮಾಸಿಕ ಸಭೆಯು ಉಳಿ ಗ್ರಾ.ಪಂ. ಸಭಾಂಗಣದಲ್ಲಿ ಜು. 24ರಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಯಿತು.
ಅವರು ಮಾತನಾಡಿ ಬಂಟ್ವಾಳದಲ್ಲಿ 2004ರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಕಾರ್ಯಾರಂಭಗೊಂಡು ಸಾವಿರಕ್ಕೂ ಅಧಿಕ ಸ್ವಸಹಾಯ ಸಂಘಗಳನ್ನು ಹೊಂದಿದೆ.
ಅನೇಕ ಬಡವರು ಯೋಜನೆಯಿಂದ ಪ್ರಯೋಜನವನ್ನು ಪಡೆಯುತಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಜನರು ಸ್ವಸಹಾಯ ಸಂಘದಿಂದ ಸ್ವಾವಲಂಬಿ ಬದುಕನ್ನು ಮಾಡುತ್ತಿದ್ದಾರೆ.
ನಮ್ಮ ಪ್ರಧಾನಮಂತ್ರಿಯವರು ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ಸನ್ನು ಕಂಡು ಪರಮಾಪೂಜ್ಯ ಡಾ| ಡಿ.ವಿರೇಂದ್ರ ಹೆಗ್ಗಡೆಯವರನ್ನು ಜನರ ಸೇವೆಗೋಸ್ಕರ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದರು. ಈಗ ಡಿಜಿಟಲ್ ಯುಗವಾಗಿದ್ದು ಸಂಘದ ಸದಸ್ಯರ ಸಾಲದ ಮೊತ್ತವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಯಾವುದೇ ಮೋಸ ವಂಚನೆ ಆಗುವುದಿಲ್ಲ ಎಂದು ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ.ಪಿ , ಬಂಟ್ವಾಳ ತಾಲೂಕು ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ , ಉಳಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ , ಪುಂಜಾಲಕಟ್ಟೆ ವಲಯ ಮೇಲ್ವಿಚಾರಕ ಅಶ್ವಿನಿ , ಬಂಟ್ವಾಳ ತಾಲೂಕು ಸಮನ್ವಯಾಧಿಕಾರಿಗಳಾದ ಸ್ವಪ್ನಾ , ಕರ್ಲ ಕಾರ್ಯಕ್ಷೇತ್ರದ ಉಷಾ , ಉಳಿ ಕಾರ್ಯ ಕ್ಷೇತ್ರದ ಶೇಖರ ಹಾಗೂ ಉಳಿ ಎ+ಬಿ ಒಕ್ಕೂಟದ ೩೦೦ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸಿದ್ದರು.