ಶ್ರೀ ಒಡಿಯೂರು ರಥೋತ್ಸವಕ್ಕೆ ಸಂಭ್ರಮದ ತೆರೆ

0

ವಿಟ್ಲ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಜ.31ರಂದು ಸಂಭ್ರಮದ ರಥೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ರಥೋತ್ಸವದ ಪ್ರಯುಕ್ತ ಬೆಳಗ್ಗೆ ಶ್ರೀಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇ.ಮೂ. ಚಂದ್ರಶೇಖರ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಬೆಳಗ್ಗೆ ಶ್ರೀಸತ್ಯನಾರಾಯಣ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ಪೂಜೆಯ ಪೂರ್ಣಾಹುತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 3 ಗಂಟೆಯಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾರ್ಪಣಂ ನಡೆಯಿತು. ಸಾಯಂಕಾಲ ಜರ್ನಿ ಥೇಟರ್ ಗ್ರೂಪ್ ಮಂಗಳೂರು ಇವರಿಂದ ‘ಗೋಂದೋಳು’ ತುಳು ನಾಟಕ ನಡೆಯಿತು. ರಾತ್ರಿ 7.30ರಿಂದ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀಸಂಸ್ಥಾನದಿಂದ ಗ್ರಾಮ ದೇವಸ್ಥಾನ (ಮಿತ್ತನಡ್ಕ)ಕ್ಕೆ ತೆರಳಿ ಕನ್ಯಾನ ಪೇಟೆ ಸವಾರಿ ಬಳಿಕ ಸದ್ಗುರು ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂದಿರುಗಿತು.


ವಿಶೇಷ ಆಕರ್ಷಣೆ:

ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿಯಿಂದ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ಮಿತ್ತನಡ್ಕ ಮಲರಾಯಿ ದೈವಸ್ಥಾನದ ಬಳಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಥೋತ್ಸವ ಮೆರವಣಿಗೆಯಲ್ಲಿದ್ದ ಕುಣಿತ ಭಜನೆ, ಚೆಂಡೆಮೇಳ, ಸಿಡಿಮದ್ದು ಪ್ರದರ್ಶನ, ಬೊಂಬೆಕುಣಿತ ಟ್ಯಾಬ್ಲೋಗಳು ಭಕ್ತಾಧಿಗಳ ಕಣ್ಮನ ಸೆಳೆಯಿತು. ಊರಪರವೂರ ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here