ಫರಂಗಿಪೇಟೆ: ಶ್ರೀ ರಾಮ ನಾಮ ತಾರಕ ಜಪಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಂಟ್ವಾಳ : ದ. 24 ರಂದು ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣವಾಗಲಿರುವ ಹನುಮ ಸಾನಿಧ್ಯ ಪುಣ್ಯ ಭೂಮಿ , ವಿಜಯನಗರ ಫರಂಗಿಪೇಟೆ ಇಲ್ಲಿ  ನಡೆಯಲಿರುವ  ಶ್ರೀ ರಾಮ ನಾಮ ತಾರಕ ಜಪಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ವೀರಾಂಜನೇಯ ವ್ಯಾಯಾಮ ಶಾಲೆಯ ಆವರಣದಲ್ಲಿ  ವಿಜಯಲಕ್ಷ್ಮಿ ಸ್ಟೀಲ್ಸ್ ಬಿಸಿರೋಡ್ ಇದರ  ಮಾಲಕರಾದ ರಾಘವೇಂದ್ರ ಪ್ರಭು ಬಿಡುಗಡೆಗೊಳಿಸಿದರು .

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡಮಣ್ಣು ಕಾಂತಪ್ಪ ಶೆಟ್ಟಿ ,ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ  ತೇವು ತಾರಾನಾಥ ಕೊಟ್ಟಾರಿ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಗಡಿಕಾರರಾದ ಅರ್ಕುಳ  ಕಂಪ ಸದಾನಂದ ಆಳ್ವ  , ಶ್ರೀ ವೀರಾಂಜನೇಯ ಮಂದಿರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರು ಗುತ್ತು ,  , ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಪ್ರದಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ , ಸಂಚಾಲಕರಾದ ವಿಠ್ಠಲ್ ಆಳ್ವ ಗರೋಡಿ,  ಶ್ರೀ ರಾಮ ನಾಮ ತಾರಕ ಜಪಯಜ್ಞ ಕ್ಕೆ ಸಮಿತಿ ಅಧ್ಯಕ್ಷ ಅನಿಲ್ ಪಂಡಿತ್ , ಕಾರ್ಯದರ್ಶಿ ಸಂತೋಷ್ ನೆತ್ತರಕೆರೆ , ಕೋಶಾಧಿಕಾರಿ ಮನೋಜ್ ತುಪ್ಪೆಕಲ್ಲು, ಸಂಯೋಜಕ ದಾಮೋದರ ನೆತ್ತರಕೆರೆ  ಹಾಗು ಇತರ ಪದಾಧಿಕಾರಿಗಳು   ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here