ಬಂಟ್ವಾಳ ಕರಾಟೆ ಒಂದು ಅದ್ಭುತ ಕಲೆ, ರಕ್ಷಣಾತ್ಮಕ ಕೌಶಲ,ಚುರುಕುತನ ವೃದ್ಧಿಸುವ ಆಟ ಎಂದು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ ರೋಟರಿಯ ಝೋನ್ 4 ರ ಝೋನಲ್ ಲೆಫ್ಟಿನೆಂಟ್ ಆದ ರಾಘವೇಂದ್ರ ಭಟ್ ಹೇಳಿದರು. ಹೊಕ್ಕಾಡಿಗೋಳಿ ಶಾಲೆಯಲ್ಲಿ ಕರಾಟೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ತಿಂಗಳ ಮಕ್ಕಳ ತರಬೇತಿ ವೆಚ್ಚ ಹಾಗೂ ಮುಂದಿನ ದಿನಗಳಲ್ಲಿ ಭಾಗವಹಿಸುವ ಸ್ಪರ್ಧೆಯ ಖರ್ಚುಗಳನ್ನು ತಾವೇ ಭರಿಸುವ ಪ್ರಾಯೋಜಕತ್ವದ ವಾಗ್ಧಾನವಿತ್ತರು. ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಅಜ್ಜಾಡಿ ದೀಪ ಬೆಳಗಿಸಿ ತರಬೇತಿ ಉದ್ಘಾಟಿಸಿದರು.
ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಜೋಕಿಂ ಪಿಂಟೋ ಕರಾಟೆ ತರಗತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಾಟೆ ಶಿಕ್ಷಕ ಕಿಶೋರ್ ತರಬೇತಿ ನಡೆಸಿಕೊಟ್ಟರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸದಾಶಿವ ಪೂಜಾರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಗುರುಗಳಾದ ಸುಮಿತ್ರಾ ಸ್ವಾಗತಿಸಿ, ಸುಚಿತ್ರಾ ವಂದಿಸಿದರು. ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರು, ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.