ಬಂಟ್ವಾಳ ತಾ. ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ನ.27ರಂದು ನಡೆಯಿತು.
ಉಡುಪಿ ಸೋಧೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಇದೊಂದು ಪುರಾತನ ದೇವಸ್ಥಾನವಾಗಿದ್ದು, ಅತ್ಯಂತ ಸುಂದರವಾಗಿ ದೇವರ ಪುನರ್ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಅವರು ಹೇಳಿದರು.
ದೇವಸ್ಥಾನದ ಪರಿಸ್ಥಿತಿಯನ್ನು ನೋಡಿದಾಗ ಗ್ರಾಮದ ಜನರ ಪರಿಸ್ಥಿತಿಯನ್ನು ಅಂದಾಜಿಸಬಹುದು ಎಂದು ಅವರು ಹೇಳಿದರು.
ಜನರಿಗೆ ದೇವರ ಆರಾಧನೆ ಸುಲಭವಾಗಿ ಮಾಡಲು ಗ್ರಾಮ ಗ್ರಾಮಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಕಣ್ಣಿಗೆ ಕಾಣದ ದೇವರು ಸರ್ವಾಂತರವ್ಯಾಮಿ , ಆದರೆ ದೇವರ ಅನುಭವಕ್ಕಾಗಿ ಹಿರಿಯರು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.
ಸಾಧು ಸಂತರು, ಧಾರ್ಮಿಕ ನೇತಾರರು ತಮ್ಮ ಆಧ್ಯಾತ್ಮಿಕ ಚಿಂತನೆಯನ್ನು ಬೆಳಗಿಸಿದ ದೇಶ ನಮ್ಮದು ಎಂದು ಕಿಯೋನಿಕ್ಸ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ,ಮಾತನಾಡಿ, ವಿವಿಧ ಜಾತಿ ಮತ ಧರ್ಮ ಭಾಷೆಗಳ ವಿಶಿಷ್ಟ ದೇಶ ನಮ್ಮ ದೇಶ. ನಮ್ಮ ತುಳುನಾಡಿನಲ್ಲಿ ಹುಟ್ಟಿದ ನಾವು ಭಾಗ್ಯವಂತರು.ಪ್ರೀತಿಯಿಂದ ಮಾನವ ಜನ್ಮವನ್ನು ಸಾರ್ಥಕ ಗೊಳಿಸಬೇಕು. ನಮ್ಮ ಆತ್ಮವನ್ನು ಶುದ್ದೀಕರಿಸುವ ಬ್ರಹ್ಮಕಲಶವಾಗಬೇಕು ಎಂದು ಹೇಳಿದರು.
ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಮುಂಬಯಿ ಉದ್ಯಮಿ ಜಯರಾಮ ಶೆಟ್ಟಿ ಕಾಪು, ಪುತ್ತೂರು ತಾ.ಪಂ.ನ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್, ಆರ್.ಎಸ್.ಎಸ್.ಪ್ರಮುಖ ಸುಭಾಶ್ವಂದ್ರ ಬಾಳಿಗ ಅಯ್ಯನಕಟ್ಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಆಡಳಿತ ಸಮಿತಿ ಸದಸ್ಯ ಜಾರಪ್ಪ ಕುಲಾಲ್, ಸಮಿತಿ ಪ್ರಮುಖರಾದ ವೀರೇಂದ್ರ ಅಮೀನ್, ನಿವೃತ್ತ ಶಿಕ್ಷಕ ಶ್ರೀಪತಿ ಭಟ್, ಪ್ರಮೋದ್ ಕುಮಾರ್ ರೈ, ಹರೀಂದ್ರ ಪೈ,ಮಹಾಬಲ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೇಸಪ್ಪ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು
ಕ್ಷೇತ್ರದ ತಂತ್ರಿ ವೇ.ಮೂ. ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರಶಾಂತ ಐತಾಳ ಅವರ ಪೌರೋಹಿತ್ಯದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.
ಯೋಗೀಶ್ ಕಲಸಡ್ಕ ಪ್ರಸ್ತಾವಿಸದರು.
ಸುರೇಶ್ ಉರುಡಾಯಿ ಸ್ವಾಗತಿಸಿ, ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.