ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ನೀರಿನಗಂಟೆ(ವಾಟರ್ ಬೆಲ್)ಭಾರಿಸಲು ಸೂಚನೆ ನೀಡಲಾಗಿದೆ.ಬೆಳಗ್ಗೆ 10.35ಕ್ಕೆ ಮೊದಲ ಗಂಟೆ, ಎರಡನೆಯದ್ದು ಮಧ್ಯಾಹ್ನ 12ಕ್ಕೆ ಮತ್ತು ಮಧ್ಯಾಹ್ನ 2 ಗಂಟೆಗೆ ಮೂರನೇ ಗಂಟೆ ಭಾರಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಬೆಲ್ ಮಾಡುವ ಪದ್ಧತಿ ಈಗಾಗಲೇ ಕೇರಳದಲ್ಲಿ ಇತ್ತು. ಅದೇರೀತಿ ಕರ್ನಾಟಕದಲ್ಲೂ ಹೊಸ ನಿಯಮ ಜಾರಿಗೆ ತರಲು ಯೋಚಿಸಲಾಗಿದೆ.ಮೂರು ಬೆಲ್ ಹಾಕಿದ ತಕ್ಷಣ ಮಕ್ಕಳು ನೀರು ಕುಡಿಯುವಂತೆ ಸೂಚಿಸಲಾಗುತ್ತದೆ. ಶಾಲಾ ಮಕ್ಕಳಲ್ಲಿ ನೀರಿನ ಅಂಶದ ಕೊರತೆ ನೀಗಿಸುವ ಉದ್ದೇಶದಿಂದ ಹಾಗೂ ನಿಯಮಿತವಾಗಿ ವಿದ್ಯಾರ್ಥಿಗಳಿಗೆ ನೀರು ಕುಡಿಯುವಂತೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದ್ದು, ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ ನೀರಿನ ಬೆಲ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
2019ರಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಯೋಜನೆಯನ್ನು ಜಾರಿಗೊಳಿಸಲು ಯೋಚಿಸಿದ್ದರು.ಸಚಿವ ಬಿ.ಸಿ.ನಾಗೇಶ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದ್ದರಿಂದ, ಮತ್ತೆ ಈ ಯೋಜನೆ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.ಮಕ್ಕಳು ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಅಷ್ಟೇ ಅಲ್ಲ ಕೆಲವೊಮ್ಮೆ ನಿರ್ಜಲೀಕರಣ ಹಾಗೂ ಹೊಟ್ಟೆನೋವು, ಒಣ ಗಂಟಲು ಮತ್ತು ತಲೆ ನೋವಿನ ಕಾರಣದಿಂದ ಶಾಲೆಗೆ ಗೈರಾಗುವುದನ್ನು ತಪ್ಪಿಸುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ತಪ್ಪಿಸಲು ಇದು ಸಹಕಾರಿಯಾಗಲಿದೆ.