ಬಂಟ್ವಾಳ : ಭೀಮ್ ಸಂಜೀವಿನಿ ಬೋಳಂತೂರು ಇದರ ಆಶ್ರಯದಲ್ಲಿ ನ.6 ರಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಾಹಿತಿ ಕಾರ್ಯಕ್ರಮವು ಬೋಳಂತೂರು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ಜರಗಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮ್ ಸಂಜೀನಿಯ ಅಧ್ಯಕ್ಷರಾದ ಶ್ರೀನಿವಾಸ ಬಂಗಾರುಕೋಡಿ ವಹಿಸಿದ್ದರು.
ಕಾರ್ಯಕ್ರಮವನ್ನು ಭೀಮ್ ಸಂಜೀವಿನಿಯ ಗೌರವ ಸಲಹೆಗಾರ ನೋಣಯ್ಯ ಜಿ. ಯನ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಶಿಕ್ಷಕರು ಭೀಮ್ ಸಂಜೀವಿನಿಯ ಗೌರವ ಸಲಹೆಗಾರರಾದ ಹರೀಶ್ .ವಿ.ರವರು ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು, ನಂತರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆ.ಎಸ್. ವಿಮಲೇಶ್ ಶಿಂಗಾರಕೋಡಿ ವಕೀಲರು ಪುತ್ತೂರು ಇವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಭಾಂದವರಿಗೆ ಕಾನೂನು ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಭೀಮ್ ಸಂಜೀವಿನಿಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಬಿ.ಆರ್ ನಗರ, ಮೈರೆ ನಾರಂಕೋಡಿ ಗೌರವಾಧ್ಯಕ್ಷರು ಮಹಿಳಾ ಭೀಮ್ ಸಂಜೀವಿನಿ, ಸದಾನಂದ ಬಿ.ಆರ್ ನಗರ ಗೌರವಧ್ಯಕ್ಷರು, ಉಪಾಧ್ಯಕ್ಷರಾದ ಈಶ್ವರ ನಾಯ್ಕ, ಜಲಜ ಬಪ್ಪನ್ ತೋಟ, ಮತ್ತು ಲಲಿತ ಗುಂಡಿಮಜಲು, ತಿಲಕ್ ಕೊಕ್ಕಪುಣಿ, ಮಹೇಶ್ ಕಲ್ಪನೆ, ರಮೇಶ್ ಬೋಳಂತೂರು, ಶಶಿಧರ್ ಬಿ.ಆರ್ ನಗರ, ಮಹೇಶ್ ಕೊಕ್ಕ ಪುಣಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಸುನಂದ ಗುಂಡಿಮಜಲು ಪ್ರಾರ್ಥಿಸಿ, ಪುಷ್ಪಾ ಸ್ವಾಗತಿಸಿ, ಮಮತ ಗುಂಡಿಮಜಲು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ಪ ಕಲ್ಪನೆ ವಂದಿಸಿದರು