ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕಇದರ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

0

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕಇದರ “ವಿಕ್ರಂ ಸಾರಾಭಾಯಿ” ಎಂಬ ಹೆಸರಿನ ನೂತನ ವಿಜ್ಞಾನ ಪ್ರಯೋಗಾಲಯವನ್ನುಮುಂಬೈನ ನಿದರ್ಶನ್ ಗೋವಾನಿ,ಡೈರೆಕ್ಟರ್‌ಆಫ್ ಪ್ರಾಪರ್ಟಿ ಮ್ಯಾನೇಜ್ಮೆಂಟ್‌ನ ಟ್ರಸ್ಟಿ ಹಾಗೂ ಕಮಲ ಅಂಕಿ ಬಾಯಿ ಗೋಮಂದಿರಂಗೋವಾನಿ ಟ್ರಸ್ಟ್‌ಇವರು ಉದ್ಘಾಟಿಸಿದರು.
ಶಕುಂತಲಾ ಅಯ್ಯರ್‌ಸುಭಿಕ್ಷ ಫಾರ್ಮರ್ಸ್ ಸೊಸೈಟಿ ಉಚ್ಚ ನ್ಯಾಯಾಲಯ ಇದರ ಸಿ.ಇ.ಓ ಇವರು ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ರಮೇಶ್ ಗೋವಾನಿ ಮಾಲಕರು ಕಮಲ ಗ್ರೂಪ್ ಮುಂಬೈ , ವಿವೇಕ ಮಿತ್ತಲ್‌ ರಿಯಲ್‌ಎಸ್ಟೇಟ್‌ ಉದ್ಯಮಿ ಮುಂಬೈ, ಪವನ್‌ಚಂದ್ರ ಶೆಟ್ಟಿ ವಕೀಲರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ವಿಶಾಲ ಸಾಲಿಯಾನ್‌ ಅಧ್ಯಕ್ಷರು ಸಣ್ಣ ಕೈಗಾರಿಕಾ ಉದ್ಯಮಿ ದಕ್ಷಿಣಕನ್ನಡ ಹಾಗೂ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು,ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕರು ರಮೇಶ್‌ಎನ್,ಶೈಕ್ಷಣಿಕ ಪರಿವೀಕ್ಷಕರು ಲಕ್ಷ್ಮಿ ರಘುರಾಜ್,ಪ್ರೌಢಶಾಲಾ ಆಡಳಿತ ಅಧಿಕಾರಿ ಶಾಂಭವಿ, ಮುಖ್ಯೋಪಾಧ್ಯಾಯರು ಗೋಪಾಲ ಎಂ,ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ತಾವೇ ತಯಾರಿಸಿದ ವೈಜ್ಞಾನಿಕ ಮಾದರಿಗಳ ಬಗ್ಗೆ ವಿವರಣೆ ನೀಡುವುದರ ಮೂಲಕ ಅತಿಥಿಗಳ ಮೆಚ್ಚುಗೆಯನ್ನು ಪಡೆದರು.ಅಂತಿಮವಾಗಿ ರಿಮೋಟ್ ಮೂಲಕ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಪಟಾಕಿ ರಾಕೆಟ್‌ನ್ನು ಅತಿಥಿಗಳು ಉಡಾಯಿಸಿದರು.

LEAVE A REPLY

Please enter your comment!
Please enter your name here