ಬಿಸಿರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಆಗಾಗ ನಡೆಯುತ್ತಿರುವ ಅಪಘಾತಗಳು: ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಭೇಟಿ

0

ಬಿಸಿರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಸಂಪೂರ್ಣ ವಾದ ಬಳಿಕ ಕೆಲವೊಂದು ಅಯಕಟ್ಟಿನ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಿದ್ದು, ಈ ಸ್ಥಳಗಳಿಗೆ ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಬಂಟ್ವಾಳ ಬೈಪಾಸ್ ರಸ್ತೆ ,ಜಕ್ರಿಬೆಟ್ಟು , ಚೆಂಡ್ತಿಮಾರ್ ಈ ಮೂರು ಕಡೆಗಳಿಗೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಗತ್ಯವಾಗಿ ಆಗಬೇಕಾದ ಕಾರ್ಯಗಳನ್ನು ಶೀಘ್ರವಾಗಿ ಮಾಡುವಂತೆ ತಿಳಿಸಿದರು.
ಇತ್ತೀಚಿಗೆ ಅಪಘಾತ ನಡೆದು ಪ್ರಾಣಹಾನಿಯಾದ ಸ್ಥಳಗಳಲ್ಲಿವಾಹನ ಸವಾರರಿಗೆ ಎಚ್ಚರಿಕೆಯ ದೃಷ್ಟಿಯಿಂದ ಸೂಚನ ಫಲಕಗಳು,
ಸಿಗ್ನಲ್ ಲೈಟ್ , ರಿಪ್ಲೆಕ್ಟರ್ ಅಳವಡಿಕೆ, ಸೈನ್ ಬೋರ್ಡ್ ಅಳವಡಿಕೆ ಮಾಡುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

159 ಕೋಟಿ ವೆಚ್ಚದಲ್ಲಿ 16.85 ಮೀ.ಉದ್ದದ ಡಾಮರುರಸ್ತೆ ಹಾಗೂ 3.85 ಮೀ ಉದ್ದದ ಕಾಂಕ್ರೀಟ್ರ ಸ್ತೆ ನಿರ್ಮಾಣವಾಗಿದೆ.

ಈ ಸಂದರ್ಭ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ , ಕಾರ್ಯದರ್ಶಿ ಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ವಿಶ್ವನಾಥ ಚೆಂಡ್ತಿಮಾರ್, ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್, ಬಂಟ್ವಾಳ ನಗರ ಠಾಣಾ ಎಸ್. ಐ. ಅವಿನಾಶ್, ಟ್ರಾಫಿಕ್ ಎಸ್.ಐ.ಮೂರ್ತಿ, ಕೆ.ಎಸ್.ಆರ್‌.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಶ ಭಟ್
ಎ.ಇ.ಇ.ಪ್ರಭಾರ ಮಹಾಬಲ ನಾಯಕ್, ಸಹಾಯಕ ಇಂಜಿನಿಯರ್ ಕೀರ್ತಿ ಅಮೀನ್, ಗುತ್ತಿಗೆದಾರ ಮೊಗರೋಡಿ ಕನ್ಸ್ಟ್ರಕ್ಷನ್ಸ್ ನ ದಾಮೋದರ ಮತ್ತಿರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here