ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ವೇದವ್ಯಾಸ ಧ್ಯಾನಮಂದಿರದಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಅ.25ರಂದು ಆಚರಿಸಿದರು.
ದೀಪಾವಳಿ ಎಂದರೆ ಕೇವಲ ಪಟಾಕಿ ಹಚ್ಚುವುದು, ಹಣತೆಉರಿಸುವುದಷ್ಟಕ್ಕೆ ಸೀಮಿತವಲ್ಲ. ಈ ಆಚರಣೆಯ ಹಿಂದೆ ಹಲವು ಪುರಾಣ ಕಾಲದಕತೆ, ಸಂಪ್ರದಾಯ, ಸಂಸ್ಕೃತಿ ಇದೆ. ಲೋಕಕಲ್ಯಾಣಕ್ಕಾಗಿ ನರಕಾಸುರನನ್ನು ಚತುದರ್ಶಿಯಂದು ಶ್ರೀಕೃಷ್ಣನು ವಧಿಸಿರುತ್ತಾನೆ. ಈ ದಿನವನ್ನು ನರಕ ಚತುದರ್ಶಿಯಾಗಿ ಆಚರಿಸಲಾಗುತ್ತದೆ.ಮಾರನೆಯ ದಿನ ದೀಪಾವಳಿಯ ಅಮಾವ್ಯಾಸೆಯಾಗಿದ್ದು.ಈ ದಿನ ಲಕ್ಷ್ಮೀಪೂಜೆ ಮಾಡಲಾಗುತ್ತದೆ.ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮೀಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವ್ಯಾಸೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪರಾಧನೆಯೊಡನೆ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಹಬ್ಬದ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅವತ್ತು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆಯೂ ಇದೆ.ಈ ದಿನ ಬಲೀಂದ್ರ ಪೂಜೆಯೂ ನಡೆಯುತ್ತದೆ.ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ಅಜ್ಞಾನವೆಂಬ ಕತ್ತಲೆಯನ್ನು ಅಳಿಸಿ, ಬೆಳಕಿನ ಜ್ಞಾನವನ್ನು ಪಸರಿಸುವ ಹಬ್ಬವಾಗಿದೆ.ರೈತರಿಗೆ ನೆಲ-ಜಲದ ಹಬ್ಬವಾದರೆ, ವಿದ್ಯಾರ್ಥಿಗಳಿಗೆ ಜ್ಞಾನವೆಂಬ ಬೆಳಕಿನ ಹಬ್ಬವಾಗಿದೆ. ಎನ್ನುತ್ತಾ ಶ್ರೀರಾಮ ಶಾಲೆಯ ಮುಖ್ಯೊಪಾಧ್ಯಾಯರಾದ ರವಿರಾಜ್ ಕಣಂತೂರುರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಭಾರತಮಾತೆಗೆ ದೀಪಪ್ರಜ್ವಲನೆ ಹಾಗೂ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆ ನಡೆಯಿತು.
ಮುಖ್ಯೋಪಾಧ್ಯಾಯರಾದ ರವಿರಾಜ್‌ಕಣಂತೂರು ದೀಪ ಉರಿಸುವ ಮೂಲಕ ಈ ಹಬ್ಬಕ್ಕೆ ಚಾಲನೆ ನೀಡಿದರು.ನಂತರ ಸಾಲಾಗಿ ಜೋಡಿಸಿಟ್ಟ ಹಣತೆಗಳನ್ನು ವಿದಾರ್ಥಿಗಳು ಬೆಳಗಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.