ಬಂಟ್ವಾಳ : ನೇತ್ರಾವತಿ ನದಿಯ ಎಎಂಆರ್ ಅಣೆಕಟ್ಟಿನಲ್ಲಿ ತೇಲಾಡುತ್ತಿದ್ದ ಮಹಿಳೆಯ ಶವದ ಗುರುತು ಪತ್ತೆ ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು ಮಂಗಳೂರು ಕದ್ರಿ ರುದ್ರಭೂಮಿ ರಸ್ತೆ ನಿವಾಸಿ ಶ್ರೀರಂಗ ಐತಾಳ್ ಅವರ ಪತ್ನಿ ಸುಮತಿ ಮೃತ ಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.
ಶವವನ್ನು ವಾರಿಸುದಾರರಿಗೆ ಬಂಟ್ವಾಳ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಇ.ಝಾಡ್ ಪ್ಲಾಂಟ್ ಸಮೀಪದ ನೇತ್ರಾವತಿ ನದಿಯಲ್ಲಿ ಆ. 9ರಂದು ಬೆಳಗ್ಗೆ ತೇಲಾಡುವ ಸ್ಥಿತಿಯಲ್ಲಿ ಶವದ ಪತ್ತೆಯಾಗಿತ್ತು. ಅಪರಿಚಿತ ಶವ ನೇತ್ರಾವತಿ ನದಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಬಂಟ್ವಾಳ ಹಿರಿಯ ಪುರಸಭೆ
ಸದಸ್ಯ ಎ. ಗೋವಿಂದ ಪ್ರಭುಅವರು ಬಂಟ್ವಾಳದ ಪೊಲೀಸರ ಗಮನಕ್ಕೆ ತಂದರು. ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿದ ಪೊಲೀಸರು ಅಪರಿಚಿತ ಶವದ ಗುರುತು ಪತ್ತೆಗಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಪೊಲೀಸ್ ಮಾಹಿತಿ
ಆಧರಿಸಿ ಬಂಟ್ವಾಳ ಪೊಲೀಸರ ಮುಖಾಂತರ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ. ಆ. 3ರಂದು ಸುಮತಿ ಅವರು ಮಧ್ಯಾಹ್ನ ಮನೆಯಿಂದ ಯಾರಿಗೂ ಹೇಳದೆ ಮೊಬೈಲ್ ಮನೆಯಲ್ಲಿಟ್ಟು ಹೋದವರು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.