ಬಂಟ್ವಾಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಬಾ ಕ್ಷೇತ್ರ ಮತ್ತು ದೇವಾಡಿಗ ಸಮುದಾಯಕ್ಕೆ ಅವಿನಭಾವ ಸಂಬಂಧ ಇದೆ. ಈ ಸಮಾಜದ ವತಿಯಿಂದಲೇ ನೂತನ ರಥ ಸಮರ್ಪಣೆ ನಡೆಯುತ್ತಿರುವುದು ದೇವರ ಇಚ್ಛೆಯೂ ಆಗಿದೆ ಎಂದು ದೇವಳದ ಪ್ರಧಾನ ಅರ್ಚಕ ಮಹೇಶ ಭಟ್ ಹೇಳಿದ್ದಾರೆ.
ಇಲ್ಲಿನ ನಂದಾವರ ಕ್ಷೇತ್ರದಲ್ಲಿ ದೇವಾಡಿಗ ಸಮಾಜದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ರಥ ಸಮರ್ಪಣೆ ವಿಜ್ಞಾಪನಾ ಪತ್ರ ಸೆ26ರಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ಪ್ರಾಸ್ತಾವಿಕ ಮಾತನಾಡಿ, ಈಗಾಗಲೇ ಪೊಳಲಿ ಕ್ಷೇತ್ರಕ್ಕೆ ಷಷ್ಠಿ ರಥ ಸಮರ್ಪಿಸಿದ ದೇವಾಡಿಗ ಸಮಾಜ ನಂದಾವರ ಕ್ಷೇತ್ರಕ್ಕೆ ರೂ 20ಲಕ್ಷ ವೆಚ್ಚದಲ್ಲಿ ರಥ ಸಮರ್ಪಿಸಲು ನಿರ್ಧರಿಸಿದೆ. ಆ ಮೂಲಕ ಸಮಾಜವು ಸಂಘಟಿತರಾಗಿ ಶೈಕ್ಷಣಿಕ ಮತ್ತು ರಾಜಕೀಯವಾಗಿ ಬಲವರ್ಧನೆಯಾಗಲಿದೆ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಉಪಾಧ್ಯಕ್ಷ ರಾಮಪ್ರಸಾದ್ ಪೂಂಜಾ, ಸದಸ್ಯರಾದ ಜಯಶಂಕರ್ ಬಾಸ್ರಿತ್ತಾಯ, ವಿಶ್ವನಾಥ ಆಳ್ವ, ರೂಪೇಶ್ ಆಚಾರ್ಯ, ಅಶೋಕ್, ಸಮಿತಿ ಗೌರವಾಧ್ಯಕ್ಷ ಡಾ. ಸುಂದರ ಮೊಯಿಲಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯಿಲಿ, ಗೌರವ ಸಲಹೆಗಾರ ಪದ್ಮನಾಭ ಬಂಟ್ವಾ, ಪ್ರವೀಣ ದೇವಾಡಿಗ ನೆಟ್ಲ ಮತ್ತಿತರರು ಇದ್ದರು.