ಬಿ.ಸಿ.ರೋಡ್: ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿದೋದ್ದೇಶ ಸಹಕಾರಿ ಸಂಘ ನಿ. ವಾರ್ಷಿಕ ಮಹಾಸಭೆ

0


ಬಂಟ್ವಾಳ: ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿದೋದ್ದೇಶ ಸಹಕಾರಿ ಸಂಘ ನಿ. ಬಿ.ಸಿ.ರೋಡ್ ಇದರ 2021-22 ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎ. ಸತೀಶ್ಚಂದ್ರ ಹೊಸಮನೆ ಅಧ್ಯಕ್ಷತೆಯಲ್ಲಿ ಸೆ. 24ರಂದು ಬಿ.ಸಿ.ರೋಡ್ ತಾಲೂಕು ಪಂಚಾಯತ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆಯಿತು.

ಸಂಘವು ವರದಿ ವರ್ಷದಲ್ಲಿ 1561 ಮಂದಿ ಸದಸ್ಯರನ್ನು ಹೊಂದಿದ್ದು , ರೂ. 51.76 ಕೋಟಿ ವ್ಯವಹಾರ ನಡೆಸಿ ರೂ. 30.40 ಲಕ್ಷ ಲಾಭ ಹೊಂದಿರುವುದು. ರೂ. 58.83ಲಕ್ಷ ಪಾಲು ಬಂಡವಾಳ, ರೂ. 15.28 ಕೋಟಿ ಠೇವಣಿ, ರೂ. 13.59 ಕೋಟಿ ಹೊರಬಾಕಿ ಹೊಂದಿರುವುದು. ಸದಸ್ಯರಿಗೆ ಶೇ. 11 ಪಾಲು ಮುನಾಪೆಯನ್ನು ಸಭಾ ಕಲಾಪದ ಬಳಿಕ ಸ್ಥಳದಲ್ಲಿ ವಿತರಿಸುವುದಾಗಿ ತಿಳಿಸಿದರು.

ಸಂಘವು 2002ರಲ್ಲಿ ಸ್ಥಾಪನೆ ಆಗಿದ್ದು ರಜತ ವರ್ಷಾಚರಣೆ ಪೂರ್ವದಲ್ಲಿ ಒಟ್ಟು 25 ಶಾಖೆಗಳನ್ನು ಮಾಡುವ ಗುರಿಯನ್ನು ಹೊಂದಿದೆ. ಪ್ರಸ್ತುತ ಬಿ.ಸಿ.ರೋಡ್ ಕೇಂದ್ರ ಕಛೇರಿ ಸಹಿತ ಪಾಂಡವರಕಲ್ಲು, ಮಡಂತ್ಯಾರ್, ಮಾಣಿ, ಅಲ್ಲಿಪಾದೆ, ಕಕ್ಯಪದವುಗಳಲ್ಲಿ ಒಟ್ಟು ಆರು ಶಾಖೆಗಳು ಕಾರ್ಯಾಚರಿಸುತ್ತಿದೆ. ರೈತರು ಖರೀದಿಸಲು ಉದ್ದೇಶಿಸುವ ಸಣ್ಣ ಮಟ್ಟದ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಲವನ್ನು ನೀಡಲಾಗುವುದು. ಜೇನು ಪೆಟ್ಟಿಗೆ ಮತ್ತು ಜೇನು ಖರೀದಿ ಮಾರಾಟ, ಮಡಂತ್ಯಾರ್‌ನಲ್ಲಿ ರಬ್ಬರ್ ಖರೀದಿ, ಸಾಮಾಗ್ರಿಗಳ ಮಾರಾಟ ಜಾಲ ಹೊಂದಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರು, ನಿವೃತ್ತ ಸಿಬಂದಿಗಳನ್ನು ಮತ್ತು ಸಾ`ಕರನ್ನು, ಪ್ರತಿ`ವಂತ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯದರ್ಶಿಯವರನ್ನು ಸಮ್ಮಾನಿಸಲಾಯಿತು.

ಉಪಾಧ್ಯಕ್ಷ ಮೋಹನ್ ಪಿ.ಎಸ್. ಬಾಳ್ತಿಲ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ವಸಂತ ಬಡಗಕಜೆಕಾರು, ಈಶ್ವರ ಭಟ್ ಬೋಳಂತೂರು, ಬಿ. ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ರಾಮಚಂದ್ರ ಪೂಜಾರಿ ಕಂರ್ಬಡ್ಕ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ರಾಜೇಂದ್ರ ಹಾರ್ದೊಟ್ಟು, ರಾಜಶೇಖರ ಶೆಟ್ಟಿ ಮಡಂತ್ಯಾರು, ಜೋನ್ ಸೇರಾ ಬಡಗಕಜೆಕಾರು, ಕಾಂಚಲಾಕ್ಷಿ ಮಣಿನಾಲ್ಕೂರು, ಜಯಶ್ರೀ ಉಪ್ಪಿನಂಗಡಿ, ಜಾಜಿಕ ಶೆಟ್ಟಿ ಮುಗೆರೋಡಿ ಉಪಸ್ಥಿತರಿದ್ದರು.

ಅಧ್ಯಕ್ಷರು ಸಭಾ ಕಾರ್ಯಕಲಾಪ ನಡೆಸಿಕೊಟ್ಟರು. ಕಾರ್ಯದರ್ಶಿ ಗುಣಶೇಖರ ಕೆ. ಸ್ವಾಗತಿಸಿ, ನಿರ್ದೇಶಕರಾದ ಎಂ. ಅರವಿಂದ ಭಟ್ ಮಡವು ವಂದಿಸಿದರು, ಓಲ್ವಿನ್ ಮೋನಿಸ್ ನಾವೂರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here