ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪ್ರಾಥಮಿಕ ಆರೋಗ್ಯ ಕೇಂ ಮತ್ತು ಗ್ರಾಮ ಪಂಚಾಯತ್ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಬಿಸಿರೋಡಿನ ಸ್ತ್ರೀ ಶಕ್ತಿ ಸಭಾ ಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಟಿಕೆಗಳನ್ನು ತಯಾರಿಸುವ ಶಿಬಿರ ಜರಗಿತು. ಸಜೀಪ ಶಾರದ ಎಸ್. ರಾವ್ ಅವರು ಆಟಿಕೆ ತಯಾರಿಸುವ ಬಗ್ಗೆ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಸಿ.ಡಿ.ಪಿ.ಒಗಾಯತ್ರಿ ಕಂಬಳಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಹಿರಿಯ ಮೇಲ್ವಿಚಾರಕಿಯರಾದ ಶಾಲಿನಿ, ಗುಣವತಿ, ಮೇಲ್ವಿಚಾರಕಿಯರಾದ ಸವಿತಾ, ನೀತಾ ಕುಮಾರಿ, ಶೋಭಾ, ರೆಹನಾ, ಯಶೋಧ ,ತಾರಾ, ಲೀಲಾವತಿ ಉಪಸ್ಥಿತರಿದ್ದರು.











