ಬಂಟ್ವಾಳ: ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ನಿ. ಜೋಡುಮಾರ್ಗ ಇದರ 54 ನೇ ವಾರ್ಷಿಕ ಮಹಾಸಭೆ ಸೆ.11 ರಂದು ಬಿ. ಸಿ. ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಪಿ. ರವೀಂದ್ರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2021-22 ಸಾಲಿನಲ್ಲಿ 100.92 ಕೋಟಿ ರೂ. ವ್ಯವಹಾರ ನಡೆಸಿ 23.24 ಲಕ್ಷ ರೂ. ಲಾಭ ಪಡೆದಿದ್ದು ಶೇ. 18 ಡಿವಿಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. ಸಂಘದ ಕೇಂದ್ರ ಕಛೇರಿ ಮತ್ತು ಕೈಕಂಬ, ಮೆಲ್ಕಾರ್, ಸೂರಿಕುಮೇರು ಶಾಖೆಗಳನ್ನು ಸಂಪೂರ್ಣ ಗಣಕೀಕರಿಸಿದೆ. ಉತ್ತಮ ಪ್ರಗತಿ ಸಾಧಿಸಿದೆ. ಸದಸ್ಯರಿಗೆ ತ್ವರಿತ ಸಾಲ ವಿತರಿಸಲು ಸಾಲ ಸಮಿತಿ ರಚಿಸಿದೆ, ಆಕರ್ಷಕ ಠೇವಣಿ ಯೋಜನೆ ರೂಪಿಸಿದೆ ಎಂದರು.
ಇದೆ ಸಂದರ್ಭ 75 ಹರೆಯ ದಾಟಿದ ಪೂರ್ವ ಅಧ್ಯಕ್ಷ ಕೆ. ದಾಮೋದರ ಸಂಚಯಗಿರಿ, ರಾಮಕೃಷ್ಣ ಪುತ್ತೂರಾಯ, ವೆಂಕಟ್ರಾಯ ಕಾಮತ್, ಭವಾನಿಯಮ್ಮ ಅವರನ್ನು ಸಮ್ಮಾನಿಸಲಾಯಿತು.
ಸಹಕಾರಿಯಿಂದ ವಿದ್ಯಾರ್ಥಿ ಪ್ರತಿಭೆಗಳಾದ ಸಂಜನಾ ಭಟ್, ಚೈತನ್ಯ ಎಸ್., ಹಲಿಮತ್ ರಶೀದಾ, ಪ್ರಕಾಶ್ ಎಲ್. ಎಸ್. ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ಕೆ. ರುಕ್ಮಯ ಹೆಗ್ಡೆ, ಜಯರಾಮ ಮಯ್ಯ ಎಂ., ಉಮಾವತಿ ಶೆಟ್ಟಿ, ಪದ್ಮನಾಭ ಬಿ., ಅಬ್ದುಲ್ ಸತ್ತಾರ್, ಗಣೇಶ್ ಕಾರಂತ್, ದಿನೇಶ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಅನಂತ ಹೇರಳ ಸಮ್ಮಾನಿತರ ಪರಿಚಯ ಪತ್ರ ಓದಿದರು. ನಿರ್ದೇಶಕರಾದ ಎಸ್. ಶಿವಪ್ಪ ನಾಯ್ಕ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ವಿವರ ನೀಡಿದರು. ಅಧ್ಯಕ್ಷರು ಸ್ವಾಗತಿಸಿ, ನಿರ್ದೇಶಕರಾದ ಕೆ.ಜಯಂತ್ ನಾಯಕ್ ವಂದಿಸಿದರು. ಮುಖ್ಯಕಾರ್ಯನಿರ್ವಾಹಣಾಧಿ ಕಾರಿ ಗೀತಾ ವಿ. ಹೊಳ್ಳ ಪ್ರಸ್ತಾವನೆ ನೀಡಿದರು. ನಿರ್ದೇಶಕ ಒಲ್ವಿನ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.