ಗುರಿಮಜಲು ಸೇತುವೆಯಲ್ಲಿ ಗಬ್ಬು ನಾರುತ್ತಿರುವ ಕಸದ ರಾಶಿ..! ಸಾರ್ವಜನಿಕರಿಂದ ಆಕ್ರೋಶ

0

ಬಂಟ್ವಾಳ : ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಂದಾಳ ನಾವೂರು ಗ್ರಾಮ ಪಂಚಾಯತ್‌ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ಗುರಿಮಜಲು ಸೇತುವೆಯಲ್ಲಿ ಕಸದ ರಾಶೀ ತುಂಬಿದೆ. ಇದರಿಂದ ಬೇಸತ್ತ ಸ್ಥಳೀಯರು ʼದಕ್ಷಿಣ ಕನ್ನಡ ಜಿಲ್ಲೆಗೆ ಬಾಯಾರಿದವರಿಗೆ ನೀರು ಉಣಿಸುವ ತಾಯಿಯಾದ ನೇತ್ರಾವತಿ ಮಾಡುವ ವಿನಂತಿ. ಆತ್ಮೀಯರೇ ನಾನು ನಿಮ್ಮ ತಾಯಿ ದಯವಿಟ್ಟು ನೀವು ನಿಮ್ಮ ಮನೆಯಲ್ಲಿ ಬಿಸಾಡುವ ಕಸವನ್ನು ಕೊಳೆತ ಮಾಂಸವನ್ನು ಬೇಡದ ವಸ್ತುಗಳನ್ನು ರಾಶಿ ರಾಶಿಯಾಗಿ ತಂದು ನನ್ನ ಎದೆಗೆ ಬೀಸಾಡುತ್ತಿದ್ದೀರಿ ನೀವು ಬಿಸಾಡಿದ ಕಸದ ರಾಶಿಯಿಂದಾಗಿ ನಾನು ಹರಿಯುವ ನದಿಯ ಮುಕ್ಕಾಲು ಭಾಗ ಕಸದಿಂದ ತುಂಬಿ ಗಬ್ಬು ನಾರುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತಿಯು ಹಲವು ಸಲ ಅಧ್ಯಕ್ಷರು, ಸರ್ವಸದಸ್ಯರು, ಅಭಿವೃದ್ದಿ ಅಧಿಕಾರಿಗಳು ಸೇರಿ ಬ್ಯಾನರ್ ಆಳವಡಿಸಿ ಕಸವನ್ನು ಹಾಕುವವರ ವಿರುದ್ಧ ದಂಡವನ್ನು ಭರಿಸಿದರು ಕೂಡ ನಿಮ್ಮ ಹಠ ಸಾಧನೆಯಿಂದಾಗಿ ನನ್ನ ನದಿಯ ಮಡಿಲು ಕಸದ ರಾಶಿಯಾಗಿ ತುಂಬಿ ತುಳುಕುತ್ತಿದೆ ಮುಂದೆ ಒಂದು ದಿನ ಖಂಡಿತ ನಾನು ಕೋಪಗೊಂಡರೆ ಇಡೀ ಬಂಟ್ವಾಳ ತಾಲೂಕೇ ನೇತ್ರಾವತಿ ನದಿಯಾಗಿ ನಿಮ್ಮ ಮನೆ ಮಠ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಚ್ಚರವಿರಲಿ ದಯವಿಟ್ಟು ಕಸವನ್ನು ನದಿಗೆ ಹಳ್ಳ ತೋಡುಗಳಿಗೆ ಬಿಸಾಡಬೇಡಿʼ ಎಂದು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿ ಮಾ‍‍‍‍‍ಧ್ಯಮದೊಂದಿಗೆ ಮಾತನಾಡಿದ ನಾವೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಉಮೇಶ್ ಕುಲಾಲ್,  ಕಸದ ಮುಕ್ತಿಗಾಗಿ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡಿಬೈಲು ಎಂಬಲ್ಲಿ ಒಂದು ಎಕ್ರೆ ಸ್ಥಳವನ್ನು ಘನತ್ಯಾಜ್ಯ ಘಟಕಕ್ಕೆ ಮೀಸಲಾಗಿರಿಸಿದ್ದು ಸದ್ಯವೇ ತ್ಯಾಜ್ಯ ವಿಲೇವಾರಿಗೆಂದು ವಾಹನವನ್ನು ಖರೀದಿ ಮಾಡಲಿದ್ದೇವೆ. ಸಾರ್ವಜನಿಕರು ಕಸದ ರಾಶಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುವುದನ್ನು ಬಿಟ್ಟು ಸಾರ್ವಜನಿಕ ಸ್ಥಳಗಳನ್ನು ಕಸದಿಂದ ಮುಕ್ತಗೊಳಿಸಬೇಕಾಗಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸರ್ವಸದಸ್ಯರುಗಳು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here