ಮಂಗಳೂರು: ವಾರದ ಮೂರು ದಿನ ಮಾತ್ರ ಸಂಚರಿಸುತ್ತಿದ್ದ ಮಂಗಳೂರು ಬೆಂಗಳೂರು ರೈಲು 6 ದಿನವೂ ಸಂಚರಿಸಲಿದೆ. ಈ ಹಿಂದೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ನಂ.06547/48 ಕೆಎಸ್ಆರ್ ಬೆಂಗಳೂರು-ಮಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲನ್ನು ಈ ರೈಲಿನೊಂದಿಗೆ ವಿಲೀನಗೊಳಿಸಿ, ಕೇಂದ್ರ ರೈಲ್ವೆ ಮಂಡಳಿ ಅನುಮತಿಯ ಮೇರೆಗೆ ಬೆಂಗಳೂರು-ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ (ವಯಾ ಮೈಸೂರು) ರಾತ್ರಿಯ ರೈಲು ವಾರದ ಆರು ದಿನ ಓಡಲಿದೆ.
ಸದ್ಯ ಈ ರೈಲು ಕೆಎಸ್ಆರ್ ಬೆಂಗಳೂರು- ಮಂಗಳೂರು ಎಕ್ಸ್ಪ್ರೆಸ್ ರೈಲಿನ ಟರ್ಮಿನಲ್ ಸದ್ಯ ಇರುವ ಕೆಎಸ್ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್)ನಿಂದ ಎಸ್ಎಂವಿಬಿ (ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೈಯಪ್ಪನ ಹಳ್ಳಿ)ಗೆ ವಿಸ್ತರಿಸಲಾಗಿದೆ. ಟರ್ಮಿನಲ್ ಬದಲಾವಣೆಯಾದರೂ ಬೆಂಗಳೂರು ಸಿಟಿ, ಕಂಟೋನ್ಮೆಂಟ್, ಸಿಟಿ ಮತ್ತು ಕೆಂಗೇರಿ ಸೇರಿದಂತೆ ಈ ಹಿಂದಿನ ಮಾರ್ಗದಲ್ಲಿಯೇ ಸಂಚರಿಸಲಿದೆ. ಇದರ ಕುರಿತು ನೈಋತ್ಯ ರೈಲ್ವೆಯಿಂದ ಜುಲೈ 27ರಂದು ರೈಲ್ವೆ ಬೋರ್ಡ್ ಗೆ ಈ ಕುರಿತಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು.