ವಿಕಲಚೇತನರಿಂದ ಸುವಿಧಾ ತಂತ್ರಾಂಶದಡಿ ಅರ್ಜಿ ಆಹ್ವಾನ

0

ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2022-23ನೇ ಸಾಲಿನಿಂದ ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಮೂಲಕ ಡಿ.ಬಿಟಿ (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಿದೆ.

ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ಹಾಗೂ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಹೊಂದಿದ್ದು, ಅರ್ಹ ವಿಕಲಚೇತನರ ಫಲಾನುಭವಿಗಳು ಸುವಿಧಾ ಪೋರ್ಟಲ್‍ನ ವೆಬ್‍ಸೈಟ್:https://suvidha.karnataka.gov.inಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ:0824-2455999 ಮೂಲಕ ಕರೆ ಮಾಡುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here