ಬಂಟ್ವಾಳ, 23 : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹದಿನೆಂಟು ಸ್ಥಳಗಳಲ್ಲಿ ಒಟ್ಟು ರೂ. 102. 05 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಆ. 23ರಂದು ಶಿಲಾನ್ಯಾಸ ನೆರವೇರಿಸಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ದೇವಳದ ಹಿಂಬದಿ ಚರಂಡಿ ನಿರ್ಮಾಣ ಕಾಮಗಾರಿ 40 ಲಕ್ಷ ರೂ. ವೆಚ್ಚದ ಕಾಮಗಾರಿ, ಪೊಳಲಿ ರಾಮಕೃಷ್ಣ ತಪೋವನ ರಸ್ತೆ ಅಭಿವೃದ್ದಿ ರೂ. 10 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಗ್ರಾಮೀಣಾಭಿವೃದ್ದಿ ಇಲಾಖೆಯ ರೂ. 28 ಕೋಟಿ ರೂ. ವೆಚ್ಚದ 231 ರಸ್ತೆ ಕಿರು ಅಭಿವೃದ್ದಿ ಕಾಮಗಾರಿಗಳಿಗೆ ಇದೇ ಸಂದರ್ಭ ಚಾಲನೆ ನೀಡಲಾಯಿತು. ಅರಳ ದ್ವಾರದ ಬಳಿ ಮೂಲರಪಟ್ಣ- ಸೊರ್ನಾಡು ರಸ್ತೆ 4.10 ಕೋ. ರೂ., ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆ 1.25 ಕೋ. ರೂ., ರಾಯಿ -ಅಣ್ಣಳಿಕೆ ರಸ್ತೆ -2 ಕೋ. ರೂ., ಮೈಂದಾಳ ಮಣಿಹಳ್ಳ -ಸರಪಾಡಿ -ಬಜ ರಸ್ತೆ – 7ಕೋ. ರೂ. , ಸರಪಾಡಿ -ಪೆರ್ಲ -ಬೀಯಪಾದೆ ರಸ್ತೆ 3 ಕೋ. ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಯಿತು.
ಮುಲ್ಕಾಜೆಮಾಡ ಗ್ರಾಮದ ಕುಂಟಾಲಪಲ್ಕೆ -ಉಳಿ ರಸ್ತೆ ಕಾಮಗಾರಿ 7ಕೋ. ರೂ. , ಪಣೋಲಿಬೈಲು : ಮಾರ್ನಬೈಲು -ಮಂಚಿ-ಸಾಲೆತ್ತೂರು ರಸ್ತೆ -13 ಕೋ. ರೂ., ಮೆಲ್ಕಾರ್ -ಮಾರ್ನಬೈಲು ರಸ್ತೆ -2.40 ಕೋ. ರೂ., ಬೊಳ್ಳಾಯಿ -ಕಂಚಿಲ-ಮಂಚಿ ರಸ್ತೆ -2ಕೋ. ರೂ., ನರಹರಿ ಪರ್ವತ : ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆ – 2ಕೋ. ರೂ., ಕಲ್ಲಡ್ಕ -ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ – 3 ಕೋ. ರೂ. , ಕೋಡಪದವು -ಮಂಗಳಪದವು ರಸ್ತೆ -1.50 ಕೋ. ರೂ. , ಮಾಣಿ ಗ್ರಾಮದ ಮಾಣಿ ಶ್ರೀ ಉಳ್ಳಾಳ್ತಿ ಮಾಡ ರಸ್ತೆ – 2 ಕೋ. ರೂ., ಸುಧೆಕಾರು -ಕಕ್ಕೆ ಮಜಲು -ಕಾಪಿಕಾಡು ರಸ್ತೆ : 4.95 ಕೋ. ರೂ. ನರಿಕೊಂಬು – ದಾಸಕೋಡಿ ರಸ್ತೆ 4.95 ಕೋ. ರೂ., ಬೆಂಜನಪದವು – ಪಿಲಿಬೊಟ್ಟು ರಸ್ತೆ – 2.50 ಕೋ. ರೂ. ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ. ಕೆ. ಭಟ್, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ , ಹಿಂದೂಳಿದ ವರ್ಗದ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪ್ರಮುಖರಾದ ಮಾಧವ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ ಅಂತರ, ಅಭಿಷೇಕ್ ಶೆಟ್ಟಿ, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ರವಿ ಶೆಟ್ಟಿ ಕರ್ಕಳ, ದಿನೇಶ್ ಶೆಟ್ಟಿ ದಂಬೆದಾರು, ಚಂದ್ರಾವತಿ ಕರಿಯಂಗಳ, ದಿನೇಶ್ ಅಮ್ಟೂರು, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಪೊಳಲಿ ವೆಂಕಟೇಶ ನಾವಡ, ಸುಕೇಶ್ ಚೌಟ, ರೋನಾಲ್ಡ್ ಕೆಂಪು ಗುಡ್ಡೆ, ಮಾಧವ ಮಾವೆ, ವಜ್ರನಾಥ ಕಲ್ಲಡ್ಕ, ರಮಾನಾಥ ರಾಯಿ, ವಿದ್ಯಾಧರ ರೈ ಕಡೇಶಿವಾಲಯ, ಸುರೇಶ್ ಮೈರ, ರಂಜಿತ್ ಮೈರ, ಜನಾರ್ಧನ ಬೊಂಡಾಲ, ಪ್ರಭಾಕರ ಪ್ರಭು ಸಿದ್ಧಕಟ್ಟೆ, ಆನಂದ ಎ. ಶಂಭೂರು, ದೊಂಬಯ್ಯ ಅರಳ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.