ಭದ್ರಾ ಗ್ಯಾಸ್ ಏಜೆನ್ಸಿಯಲ್ಲಿ ಭಾರತ್ ಗ್ಯಾಸ್ ಲೈಟ್ ಜಿಪ್ ಎಲ್.ಪಿ.ಜಿ. ಸಿಲಿಂಡರ್ ಬಿಡುಗಡೆ ಸಮಾರಂಭ

0

ಬಂಟ್ವಾಳ: ಹಗುರ, ಸುರಕ್ಷಿತ ಹಾಗೂ ನಾಲ್ಕೇ ಗಂಟೆಗಳಲ್ಲಿ ವಿತರಣೆಯ ಗುರಿ ಹೊಂದಿರುವ ಭಾರತ್ ಪೆಟ್ರೋಲಿಯಂ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ತಲೆಮಾರಿನ ಫೈಬರ್ ಕಾಂಪೊಸಿಟ್ ಎಲ್.ಪಿ.ಜಿ. ಸಿಲಿಂಡರ್ ಭಾರತ್ ಗ್ಯಾಸ್ ಲೈಟ್ ಜಿಪ್ ಬಂಟ್ವಾಳದ ಭದ್ರಾ ಗ್ಯಾಸ್ ಏಜನ್ಸೀಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡು, ವಿತರಣೆ ಆರಂಭಿಸಿತು.


ಭಾರತ್ ಪೆಟ್ರೋಲಿಯಂ ಸಂಸ್ಥೆಯ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ ಮಾತನಾಡಿ, ಇದು ಭವಿಷ್ಯದ ಅನಿಲ ಸಿಲಿಂಡರ್ ಆಗಲಿದ್ದು, ಬಂಟ್ವಾಳಕ್ಕೆ ಪರಿಚಯಿಸಿದ ಭದ್ರಾ ಗ್ಯಾಸ್ ನ ಮಂಜುನಾಥ್ ಆಚಾರ್ಯ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು, ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿರುವುದು ಗಮನಾರ್ಹ ಎಂದರು. ಸಾಂಪ್ರದಾಯಿಕ ಗ್ಯಾಸ್ ಸಿಲಿಂಡರ್ ಗಳಿಗಿಂತ ಇದು ಹೆಚ್ಚು ಸುರಕ್ಷಿತ ಹಾಗೂ ಸುಲಭವಾಗಿ ಮಹಿಳೆಯರು ಬಳಸಬಹುದಾದ ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದೆ ಎಂದವರು ಹೇಳಿದರು. ಬಂಟ್ವಾಳದ ಕಾರ್ಮಿಕ ಇಲಾಖೆ ನಿರೀಕ್ಷಕಿ ಲವೀನಾ ಡಿಸೋಜ ಉದ್ಘಾಟಿಸಿ ಮಾತನಾಡಿ, ಹೊಸತನದೊಂದಿಗೆ ಉದ್ಯಮಗಳು ಮುನ್ನಡೆಯುವ ಸಂದರ್ಭ, ಕಾರ್ಮಿಕರಿಗೂ ಉದ್ಯೋಗಗಳು ದೊರಕುತ್ತದೆ ಎಂದು ಶುಭ ಹಾರೈಸಿದರು.


ಮಾರುಕಟ್ಟೆ ಪ್ರಬಂಧಕ ದರ್ಶಿತ್ ಮಾಲವೀಯ ಮಾತನಾಡಿ, ಸುರಕ್ಷತಾ ದೃಷ್ಟಿಯಿಂದ ಹಾಗೂ ಆಧುನಿಕ ವ್ಯವಸ್ಥೆ ಹಿನ್ನೆಲೆಯ ಈ ಸಿಲಿಂಡರ್ ಉಪಕಾರಿ ಎಂದರು. ಬಿಪಿಸಿಎಲ್ ಚೀಫ್ ಮ್ಯಾನೇಜರ್ ಶರತ್ ಕಾಂಬ್ಲೆ ಮಾತನಾಡಿ, ಇದು ಭವಿಷ್ಯದ ಸಿಲಿಂಡರ್ ಆಗಿದೆ ಎಂದರು. ರೈ ಸ್ಪೈಸಿಸ್ ಮಾಲಕರಾದ ದಿವ್ಯಾ ರೈ, ದೀಪಾ ಗೋಲ್ಡ್ ಜ್ಯುವೆಲರ್ಸ್ ಮಾಲೀಕರಾದ ದೀಪಾ ನರೇಶ್ ಬಾಳಿಗಾ ಶುಭ ಹಾರೈಸಿದರು.
ಭದ್ರಾ ಗ್ಯಾಸ್ ಮಾಲೀಕರಾದ ಮಂಜುನಾಥ ಆಚಾರ್ಯ, ಆಶಾಲತಾಬಾಯಿ, ಮಧ್ವ ಎಂ. ಆಚಾರ್ಯ ಉಪಸ್ಥಿತರಿದ್ದರು.


ಪಾಲುದಾರರಾದ ಮೇಘಾ ಎಂ. ಆಚಾರ್ಯ ಸ್ವಾಗತಿಸಿದರು. ಮಾಲ್ಸಿ ಎಂ. ಆಚಾರ್ಯ ವಂದಿಸಿದರು. ವಸಂತ ಪ್ರಭು ಪ್ರಾರ್ಥನೆ ನೆರವೇರಿಸಿದರು. ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.
ಮಹಿಳಾ ಸಬಲೀಕರಣದ ಉದ್ದೇಶವನ್ನು ಸಂಸ್ಥೆ ಹೊಂದಿದ್ದು ಈ ಸಿಲಿಂಡರ್ ಅನ್ನು ಮಹಿಳೆಯರೇ ವಿತರಿಸಲಿದ್ದಾರೆ. ಇದಕ್ಕಾಗಿಯೇ ಭದ್ರಾ ಸಂಸ್ಥೆಯಿಂದ ವಾಹನಕ್ಕೆ ಚಾಲನೆ ದೊರಕಿತು. ಮನೆ ಮನೆ ವಿತರಣೆ ನಿರ್ವಹಿಸುವ ಆಟೊ ಚಾಲಕಿ ವನಿತಾ ಆರಂಭದಲ್ಲಿ ಅನಿಲದ ಜಾಡಿಗಳನ್ನು ಹೊತ್ತ ಮಿನಿ ಟೆಂಪೊ ಚಲಾಯಿಸಿದರು.

LEAVE A REPLY

Please enter your comment!
Please enter your name here