ಪಾಣೆಮಂಗಳೂರು: ಶ್ರಾವಣ ಹುಣ್ಣಿಮೆಯ ಪ್ರಯುಕ್ತ ಆ.28ರಂದು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಸಂಸ್ಕೃತ ದಿನವನ್ನು ಆಚರಿಸಲಾಯಿತು.
9ನೇ ತರಗತಿಯ ಕೃಪಾ ಸ್ವಾಗತಿಸಿದರು. ಶ್ರಾಣ್ಯ ಸಂಸ್ಕೃತ ದಿನದ ಮಹತ್ವ ತಿಳಿಸಿದರು. ತನುಶ್ರೀ ಬಹುಮಾನ ವಿತರಣೆ ನೆರವೇರಿಸಿದರು. ಯಶ್ವಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುಖ್ಯ ಶಿಕ್ಷಕರು ಸಂಸ್ಕೃತ ದಿನದ ಮಹತ್ವ ತಿಳಿ ಹೇಳಿದರು. ಸಂಸ್ಕೃತ ವಿದ್ಯಾರ್ಥಿಗಳು ಶ್ಲೋಕ ಪಠಣದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಂಸ್ಕೃತ ಶಿಕ್ಷಕಿ ತೇಜಸ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಶಿಕ್ಷಕರು ಮತ್ತು ಸಂಸ್ಕೃತ ವಿದ್ಯಾರ್ಥಿಗಳು ಭಾಗವಹಿಸಿದ್ದರು.








