ಆ.23-24ಕ್ಕೆ ‘ಪಂಚವಿಂಶತಿ’ – ಸಂಗೀತ ಬಾಲಚಂದ್ರ ಅವರಿಂದ 25 ಗಂಟೆ ದಾಸರಪದ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆಗೆ ಪ್ರಯತ್ನ

0

ಬಂಟ್ವಾಳ: ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ಸಂಗೀತ ಕ್ಷೇತ್ರದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆಗೆ ಪ್ರಯತ್ನಿಸಲಿದ್ದಾರೆ.ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ‘ಪಂಚವಿಂಶತಿ’ ಎಂದು ಹೆಸರಿಡಲಾಗಿದೆ.

ಮಹಿಳಾ ಗಾಯಕಿಯೊಬ್ಬರು ನಿರಂತರ 25 ಗಂಟೆಗಳ ಕಾಲ ದಾಸರಪದಗಳನ್ನು ಹಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ.ಉಡುಪಿಯ ಶ್ರೀ ಕೃಷ್ಣ ಮಠದ ಸಮೀಪವಿರುವ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮವು ಆ.23ರ ಬೆಳಿಗ್ಗೆ 6:30ಕ್ಕೆ ಪ್ರಾರಂಭಗೊಂಡು ಆ.24ರ ಬೆಳಿಗ್ಗೆ 7:30ಕ್ಕೆ ಮುಕ್ತಾಯಗೊಳ್ಳಲಿದೆ.ಈ 25 ಗಂಟೆಗಳ ಗಾಯನದಲ್ಲಿ ಸಂಪೂರ್ಣವಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಲಾದ 250 ದಾಸರ ಪದಗಳನ್ನು ಪ್ರಸ್ತುತಪಡಿಸಲಾಗುವುದು. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಮತ್ತು ತಬಲಾ ವಾದಕರನ್ನೊಳಗೊಂಡ ಎರಡು ಪ್ರತ್ಯೇಕ ಸಹ-ಕಲಾವಿದರ ತಂಡಗಳು ನಿರಂತರ ಲೈವ್ ಮ್ಯೂಸಿಕ್ ನೊಂದಿಗೆ ಸಾಥ್ ನೀಡಲಿವೆ.

LEAVE A REPLY

Please enter your comment!
Please enter your name here