ಬಂಟ್ವಾಳ: ದುರ್ಗಿ ಸೇವಾ ವೇದಿಕೆ, ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಂಚೆ ಇಲಾಖೆ ಪುತ್ತೂರು ಸಹಯೋಗದೊಂದಿಗೆ ಆಯೋಜಿಸಲಾದ ಆಧಾರ್ ಕಾರ್ಡ್ ತಿದ್ದುಪಡಿ, ಹೊಸ ಆಧಾರ್, ಆಯುಷ್ಮಾನ್ ಕಾರ್ಡ್, ಆರೋಗ್ಯ ವಿಮೆ, ಇ-ಶ್ರಮ ಕಾರ್ಡ್ ನೋಂದಣಿ ಶಿಬಿರ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಆಯೋಜಿಸಲಾದ ವನಮಹೋತ್ಸವ ಹಾಗೂ ಉಚಿತ ಸಸಿಗಳ ವಿತರಣೆ ಕಾರ್ಯಕ್ರಮ ಆ.9ರಂದು ದೇವಸ್ಥಾನದಲ್ಲಿ ನಡೆಯಲಿದೆ.
ನೋಂದಣಿಗೆ ಬೇಕಾದ ದಾಖಲೆಗಳು
ಹೊಸ ಆಧಾರ್ ಕಾರ್ಡ್ (18ವರ್ಷದ ಒಳಗಿನವರಿಗೆ)
ಜನನ ಪ್ರಮಾಣಪತ್ರ
ಪೋಷಕರ ಆಧಾರ್ ಕಾರ್ಡ್
ಪೋಷಕರ ಉಪಸ್ಥಿತಿ
ಜನ್ಮ ದಿನಾಂಕ ತಿದ್ದುಪಡಿ
ಪಾಸ್ಪೋರ್ಟ್
ಜನನ ಪ್ರಮಾಣ ಪತ್ರ
ಎಸ್ಎಸ್ಎಲ್ಸಿ, ಪಿಯುಸಿ ಪ್ರಮಾಣ ಪತ್ರ
ಪಿಂಚಣಿ ಪಾವತಿಯ ಆದೇಶದ ಮೂಲ ಪ್ರತಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ
ಇವುಗಳಿಗೆ ದಾಖಲೆಗಳ ಅವಶ್ಯಕತೆ ಇಲ್ಲ
ಇ-ಮೇಲ್ ತಿದ್ದುಪಡಿ
ಲಿಂಗ ಬದಲಾವಣೆ
ಮೊಬೈಲ್ ಸಂಖ್ಯೆ ತಿದ್ದುಪಡಿ
ಬಯೋಮೆಟ್ರಿಕ್ ಅಪ್ಡೇಟ್ (ಫೋಟೋ, ಫಿಂಗರ್ಪ್ರಿಂಟ್)
ಹೆಸರು ತಿದ್ದುಪಡಿ
ಜನನ ಪ್ರಮಾಣ ಪತ್ರ
ವೋಟರ್ ಐಡಿ
ಪಾಸ್ಪೋರ್ಟ್
ರೇಶನ್ ಕಾರ್ಡ್
ಚಾಲನಾ ಪರವಾನಗಿ
ವಿಳಾಸ ಬದಲಾವಣೆ
ವೋಟರ್ ಐಡಿ
ಪಾಸ್ಪೋರ್ಟ್
ರೇಶನ್ ಕಾರ್ಡ್
ಬ್ಯಾಂಕ್ ಪಾಸ್ ಪುಸ್ತಕ
ವಾಸ್ತವ್ಯ ದೃಢೀಕರಣ ಪತ್ರ
ಆಯುಷ್ಮಾನ್ ಕಾರ್ಡ್
ಆಧಾರ್ ಕಾರ್ಡ್
ಲಿಂಕ್ ಆಗಿರುವ ಮೊಬೈಲ್
ಫಲಾನುಭವಿಗಳ ಉಪಸ್ಥಿತಿ
(ಲೈವ್ ಫೋಟೋ ಕಡ್ಡಾಯ)
ಅಪಘಾತ ವಿಮೆ
ವಯೋಮಿತಿ 18-65 ವರ್ಷ
10 ಲಕ್ಷ ಕವರೇಜ್ ವಾರ್ಷಿಕ ಪ್ರೀಮಿಯಂ ರೂ. 549 ರೂ., 550 ರೂ.
15 ಲಕ್ಷ ಕವರೇಜ್ ವಾರ್ಷಿಕ ಪ್ರೀಮಿಯಂ749 ರೂ.
ದಾಖಲೆಗಳು: ಮೊಬೈಲ್, ಆಧಾರ್ ಕಾರ್ಡ್, ನಾಮಿನಿ ಆಧಾರ್ ಕಾರ್ಡ್
ಆರೋಗ್ಯ ವಿಮೆ
ವಯೋಮಿತಿ 18-65 ವರ್ಷ
ಒಬ್ಬರಿಗೆ: 776ರೂ.
ಪತಿ-ಪತ್ನಿ: 1247 ರೂ.
ಪತಿ-ಪತ್ನಿ-ಮಗು: 1604 ರೂ.
ಪತಿ-ಪತ್ನಿ-2 ಮಗು: 1956 ರೂ.
ದಾಖಲೆಗಳು: ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಇ-ಶ್ರಮ ಕಾರ್ಡ್
ಆಧಾರ್ ಕಾರ್ಡ್
ನಾಮಿನಿ ಆಧಾರ್ ಕಾರ್ಡ್
ಲಿಂಕ್ ಆಗಿರುವ ಮೊಬೈಲ್
ಬ್ಯಾಂಕ್ ಪಾಸ್ಬುಕ್
ಫಲಾನುಭವಿಗಳ ಉಪಸ್ಥಿತಿ
(ಬಯೋಮೆಟ್ರಿಕ್ ಇರಲಿದೆ)
ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ವಾರ್ಷಿಕ ಪ್ರೀಮಿಯಂ 1306 ರೂ. ಪಾವತಿಸಿದರೆ ಅಂಚೆ ಇಲಾಖೆಯ 10 ಲಕ್ಷ ರೂ. ಅಪಘಾತ ವಿಮೆ ಹಾಗೂ 15 ಲಕ್ಷ ರೂ. ಆರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದು. ಆಧಾರ್ ನೋಂದಣಿ ಅಥವಾ ತಿದ್ದುಪಡಿಗಳಿಗೆ ಅಂಚೆ ಇಲಾಖೆ ತಿಳಿಸುವ ಮೊತ್ತವನ್ನು ಫಲಾನುಭವಿಗಳೇ ಭರಿಸತಕ್ಕದ್ದು. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8277651395, 8904227771, 9945668752 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.








