ವಿಟ್ಲ: ರಸ್ತೆಬದಿಯಲ್ಲಿ ಅಪರಿಚಿತ ಬೈಕ್ ಪತ್ತೆ

0

ವಿಟ್ಲ: ಅಪರಿಚಿತ ಬೈಕ್ ಒಂದು ಕಳೆದ ಮೂರು ದಿನಗಳಿಂದ ವಿಟ್ಲ ಪೇಟೆಯ ಮಾರ್ಗದ ಬದಿಯಲ್ಲಿ ಪಾರ್ಕ್ ಮಾಡಿರುವ ವಿಚಾರ ಆ.9ರಂದು ಬೆಳಕಿಗೆ ಬಂದಿದೆ‌.

ವಿಟ್ಲದ ಬಿಎಸ್ ಬೇಕರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಕೇರಳ ನೋದಾವಣಿಯ ಬೈಕ್ ಒಂದನ್ನು ಯಾರೋ ಪಾರ್ಕ್ ಮಾಡಿ ತೆರಳಿದ್ದರು. ದಿನ ಕಳೆದರೂ ಅದರ ಮಾಲಕರು ಮರಳಿ ಬಾರದ‌ ಹಿನ್ನೆಲೆಯಲ್ಲಿ ಆ.9ರಂದು ಸಾರ್ವಜನಿಕರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ‌ ಸಂಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here