ಗಾಳಿ ಮಳೆಗೆ ನರಿಕೊಂಬು ಗ್ರಾಮದಲ್ಲಿ ಅಪಾರ ನಷ್ಟ

0

ಬಂಟ್ವಾಳ: ಮಳೆಯೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮ ನರಿಕೊಂಬು ಗ್ರಾಮದಲ್ಲಿ ಮನೆ ಹಾಗೂ ಕೃಷಿಗೆ ಭಾರಿ ನಷ್ಟ ಉಂಟಾಗಿದೆ. ನರಿಕೊಂಬು ಗ್ರಾಮದ ಕಲ್ಯಾಣ ಅಗ್ರಾರ ಎಂಬಲ್ಲಿ ಉಮೇಶ್ ಪೂಜಾರಿ ಅವರ ಅಡಿಕೆ ತೋಟದಲ್ಲಿ ಮರಗಳು ಮುರಿದು ಬಿದ್ದಿದೆ. ಇಲ್ಲಿನ ಸಂಜೀವ ಪೂಜಾರಿ ಎಂಬವರ ಅಡಿಕೆ ತೋಟದಲ್ಲೂ ಮರಗಳು ಮುರಿದು ಬಿದ್ದು ನಷ್ಟ ಉಂಟಾಗಿದೆ.

ಸಂಜೀವ ಪೂಜಾರಿಯವರ ಮನೆಗೂ ಹಾನಿಯಾಗಿದ್ದು ಹೆಂಚುಗಳು ಪುಡಿಯಾಗಿದೆ. ನರಿಕೊಂಬು ಗ್ರಾಮದ ಪೊಯಿತ್ತಾಜೆ ಎಂಬಲ್ಲಿ ಫೆಲಿಕ್ಸ್ ಡಿಸಿಲ್ವ ಎಂಬವರ ಅಡಿಕೆ ತೋಟದಲ್ಲಿ ಮರಗಳು ಮುರಿದು ಬಿದ್ದಿದೆ. ಇಲ್ಲಿನ ಯೋಗೀಶ್ ಸಪಲ್ಯ ಅವರ ಅಡಿಕೆ ತೋಟದಲ್ಲಿ ಮರಗಳು ಮುರಿದು ಬಿದ್ದಿದೆ. ಬಾಳ್ತಿಲ ಗ್ರಾಮದ ಸುಧೆಕಾರು ನಡುಮನೆಯ ಜಯಂತಿ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ನೀರಿನ ಟ್ಯಾಂಕ್‌ಗೆ ಹಾನಿಯಾಗಿದೆ. ಹೆಂಚುಗಳು ಹುಡಿಯಾಗಿದೆ.

LEAVE A REPLY

Please enter your comment!
Please enter your name here