ಬಂಟ್ವಾಳ: ಬಂಟ್ವಾಳ ನಗರ ಪಿಎಸ್ಐ ನೇತೃತ್ವದ ತಂಡವು ಮಂಗಳಪದವು ಗ್ರಾಮದ ಆಲಡ್ಕದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ.
ಎ. ಶೈಫಿಯಾ (39 ವ.), ಎ.ಎ. ರಶೀದ್ (39 ವ.) ಹಾಗೂ ಹಮೀದ್ ಸಾಹೇಬ್ (36 ವ.) ಬಂಧಿತ ಆರೋಪಿಗಳು.
ಕಾರ್ಯಾಚರಣೆ ವೇಳೆ ಆರೋಪಿಗಳಿಂದ 18 ಸಾವಿರ ರೂ. ನಗದು ಮತ್ತು 76 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಕಾಯ್ ಕಾರ್ಯಾಚರಣೆಗೆ ಬಳಸಿದ 10 ಸಾವಿರ ರೂ. ಸಹಿತ ಒಟ್ಟು 18 ಸಾವಿರ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.
ದ.ಕ ಜಿಲ್ಲಾ ಅಕ್ರಮ ಮರಳು ದಂಧೆ ಹಾಗೂ ಇಸ್ಪೀಟ್ ತಡೆ ದಳದ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ದಾಳಿ ನಡೆದಿದೆ. ಬಂಟ್ವಾಳ ನಗರ ಠಾಣೆಯ ಪಿಎಸ್ಐ ಅನಂತ ಪದ್ಮನಾಭ, ಎಎಸ್ಐ ಸಂಜೀವ, ಸಿಬ್ಬಂದಿಗಳಾದ ಉದಯ ರೈ, ಶಶಿ, ಪ್ರವೀಣ ರೈ, ಚೇತನ್, ಶ್ರೀ ರೈ, ಆದರ್ಶ, ಅಜಿತ್, ಉಮೇಶ್, ಸತೀಶ್, ಶೌರವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿವೈಎಸ್ಪಿ ಕಚೇರಿಯ ಸಂಪತ್ ಕುಮಾರ್ ಸಹಕರಿಸಿದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252








