‘ಬಿಗ್ ಬಾಸ್ ಒಟಿಟಿ’ಯಲ್ಲಿ ಕರಾವಳಿಯ ಪ್ರತಿಭೆ !

0

ಯಾರೆಲ್ಲಾ ಸೆಲೆಬ್ರೆಟಿಗಳು ಇದ್ದಾರೆ!?

ಮಂಗಳೂರು : ಕಿರುತೆರೆ ರಿಯಾಲಿಟಿ ಶೋ ಗಳಲ್ಲಿ ಸೈ ಎನಿಸಿಕೊಂಡಿರುವ ‘ಬಿಗ್ ಬಾಸ್'(Bigg Boss)ಗೆ ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ಈಗ ಕನ್ನಡದಲ್ಲೂ ಮೊದಲ ಬಾರಿಗೆ ‘ಬಿಗ್​ ಬಾಸ್​ ಒಟಿಟಿ’ (Bigg Boss Kannada OTT) ಪ್ರಾರಂಭ ಆಗುತ್ತಿದೆ. ಆಗಸ್ಟ್​ 6ರಂದು ಸಂಜೆ ಈ ಶೋಗೆ ಅದ್ದೂರಿ ಚಾಲನೆ ಸಿಗಲಿದೆ.

ಈ ಬಾರಿ ‘ಬಿಗ್​ ಬಾಸ್ ಒಟಿಟಿ’ ಶೋ​ನಲ್ಲಿ ಸಂಪೂರ್ಣ ಸೆಲೆಬ್ರಿಟಿಗಳೇ ಇರಲಿದ್ದು, ಪತ್ರಿಕೋದ್ಯಮ, ಸೋಶಿಯಲ್​ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗುತ್ತಿದೆ.

ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಊಹಾಪೂಹಗಳು ಹರಿದಾಡುತ್ತಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ‘ಟೈಮ್ಸ್​ ಆಫ್​ ಇಂಡಿಯಾ’ ಪ್ರಕಟ ಮಾಡಿದೆ. ರವಿ ಶ್ರೀವತ್ಸ, ಮಿಮಿಕ್ರಿ ಗೋಪಿ, ಗಾಯಕಿ ಆಶಾ ಭಟ್​, ರೇಖಾ ವೇದವ್ಯಾಸ್​ ಮುಂತಾದವರು ಭಾಗವಹಿಸಲಿದ್ದು ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ ಕೂಡಾ ಇರಲಿದ್ದಾರೆ ಎಂದು ಸುದ್ದಿಯಾಗಿದೆ.

ರೂಪೇಶ್ ಶೆಟ್ಟಿ

ಇವರು ಈಗಾಗಲೇ ರೂಪೇಶ್ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ನಿರೂಪಕರಾಗಿ, ನಟನಾಗಿ ಮಿಂಚುತಿದ್ದಾರೆ. ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಒಟಿಟಿ ಶೋ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

LEAVE A REPLY

Please enter your comment!
Please enter your name here