ಬಂಟ್ವಾಳ: ಅಡುಗೆ ಅನಿಲ ಪೂರೈಕೆ ವ್ಯತ್ಯಯ: ಹೊಟೇಲ್ ಗಳು ಬಂದ್

0

ಬಂಟ್ವಾಳ: ವಾಣಿಜ್ಯ ಅಡುಗೆ ಅನಿಲ ಪೂರೈಕೆ ವ್ಯತ್ಯಯದಿಂದ ಬಂಟ್ವಾಳದ ಒಂದಷ್ಟು ಹೊಟೇಲ್‌ಗಳಿಗೆ ಬಿಸಿ ತಟ್ಟಿದೆ. ಕೆಲವು ಹೊಟೇಲ್‌ ಗಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಗ್ಯಾಸ್‌ ಸಿಗದೇ ಇದ್ದರೆ ಮಾ.17ರಿಂದ ಮತ್ತಷ್ಟು ಹೋಟೆಲ್‌ಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.


ತಾಲೂಕು ಕೇಂದ್ರ ಬಿ.ಸಿ.ರೋಡ್‌ನಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ನಾಗನ ಕ್ಯಾಂಟೀನ್ ಎಂದೇ ಪ್ರಸಿದ್ಧಿ ಪಡೆದಿರುವ ಹೋಟೆಲ್ ಸೋಮವಾರ ಮುಚ್ಚಿದ್ದು, ಗ್ಯಾಸ್ ಸಿಗುವವರೆಗೂ ಮುಚ್ಚಿರಲಿದೆ. ಜೊತೆಗೆ ಇನ್ನೂ ಕೆಲವು ಸಣ್ಣ ಕ್ಯಾಂಟೀನ್‌ಗಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ನಗರದ ಕೆಲವು ಕಡೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಡುಗೆ ಒಲೆಗಳನ್ನು ನಂಬಿರುವ ಹೊಟೇಲ್‌ಗಳು ಮಾತ್ರ ಕಾರ್ಯಾಚರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here