ಏಮಾಜೆ ಸರಕಾರಿ ಶಾಲೆ ನೂತನ ಕೊಠಡಿಗೆ ಶಿಲಾನ್ಯಾಸ

0

ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮದ ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಏಮಾಜೆಗೆ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ಫಂಡ್ ವತಿಯಿಂದ 2 ನೂತನ ತರಗತಿ ಕೊಠಡಿಗಳಿಗೆ ರೂ 27,50,000 ಅನುದಾನವು ಲಭ್ಯವಾಗಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಮಾ.12ರಂದು ನಡೆಯಿತು.

ನೇರಳಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಹರೀಶ್ ಕುಲಾಲ್, ಕಟ್ಟಡ ರಚನಾ ಗುತ್ತಿಗೆದಾರದ ಅಖಿಲ್ ಶೆಟ್ಟಿ, ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು, ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪೋಷಕರು, ದಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿದರು. ಶಿಕ್ಷಕರು ಸಹಕರಿಸಿದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here