ಪ್ರಭಾಕರ ಪ್ರಭುವಿಗೆ ರಾಜ್ಯ ಮಟ್ಟದ ಸ್ವಸ್ತಿಕ್ ಸಂಭ್ರಮ 2026 ಪುರಸ್ಕಾರ

0

ಬಂಟ್ವಾಳ: ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವುದರೊಂದಿಗೆ ಇತರ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರವನ್ನು ಪಸರಿಸಿಕೊಂಡು, ಆರೋಗ್ಯ ಶಿಕ್ಷಣ, ಮತ್ತಿತರ ಕ್ಷೇತ್ರದಲ್ಲಿ ಸಲ್ಲಿಸಿದ ಸಮಾಜ ಸೇವೆಯನ್ನು ಪರಿಗಣಿಸಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭುರವರನ್ನು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ ಇವರ ವತಿಯಿಂದ ಜರಗಿದ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ 2026 ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾೖಕ್‌ ಉಳಿಪಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಸ ಎಂ. ತುಂಗಪ್ಪ ಬಂಗೇರ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡರಾದ ಸಂದೇಶ ಶೆಟ್ಟಿ, ಪ್ರಮುಖರಾದ ಹರೀಂದ್ರ ಪೈ, ವಾಲ್ಟರ್ ನಂದಳಿಕೆ, ಕಿರಣ್ ಚಂದ್ರ ಪುಷ್ಪಗಿರಿ, ಜಗನ್ನಾಥ ಶೆಟ್ಟಿ ಪುನೀತ್ ಕುಮಾರ್, ಶಾರದಾ, ಗೀತಾ ಹೆಗ್ಡೆ, ಅಬ್ದುಲ್ ಹಮೀದ್,ಮೋಹನ್ ಶೆಟ್ಟಿ, ಹೇಮಂತ್ ಕುಮಾರ್, ಸತೀಶ್ ಬಂಗೇರ, ಚಂದ್ರಶೇಖರ ಶೆಟ್ಟಿಗಾರ್, ಮಾದವ ಬಂಗೇರ, ಅಬ್ದುಲ್ಲಾ ಪಿ, ಜಯರಾಮ, ರತ್ನಾಕರ, ಶಾಜಿ ಹುಸೈನ್, ಧನ್ ರಾಜ್, ರಫಿಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಸ್ವಾಗತಿಸಿ ರಾಜೇಶ್ ಬಂಗೇರ ವಂದಿಸಿದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here