ಕಾವಳಮೂಡೂರು: ಮನೆಯ ಬೀಗ ಮುರಿದು ಚಿನ್ನಾಭರಣ-ನಗದು ಕಳವು

0


ಪುಂಜಾಲಕಟ್ಟೆ: ಮನೆಮಂದಿ ಬೆಂಗಳೂರಿಗೆ ತೆರಳಿದ್ದಾಗ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂ. ನಗದು ಕಳವುಗೈದ ಘಟನೆ ಕಾವಳಮೂಡೂರು ಗ್ರಾಮದ ಕೈಲಾರ್‌ನ ಇಬ್ರಾಹಿಂ ಎಂಬವರ ಮನೆಯಲ್ಲಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.


ಇಬ್ರಾಹಿಂ ಅವರು ಫೆ.24ರಂದು ಬೆಳಗ್ಗೆ ಮಗಳ ಮನೆಗೆಂದು ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಸುಮಾರು 10 ಪವನ್ ನ ಚಿನ್ನದ ಹಾರ ಮತ್ತು ಸುಮಾರು 5 ಮುಕ್ಕಾಲು ಪವನ್ ತೂಕದ ಚಿನ್ನದ ನೆಕ್ಲಸ್ ಅನ್ನು ಮನೆಯ ಬೆಡ್ ರೂಮಿನಲ್ಲಿರುವ ಕಪಾಟಿನಲ್ಲಿಟ್ಟು, ಇನ್ನೊಂದು ಬೆಡ್ ರೂಮಿನ ಕಪಾಟಿನಲ್ಲಿ 60 ಸಾವಿರ ರೂ. ನಗದು ಹಣವನ್ನು ಇರಿಸಿ ಮನೆಗೆ ಬೀಗ ಹಾಕಿ ಹೋಗಿದ್ದರು. ಫೆ.28ರಂದು ಬೆಳಗ್ಗೆ ಕಾವಳಕಟ್ಟೆ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮನೆಗೆ ಪೋಸ್ಟ್ ನೀಡಲು ಬಂದಾಗ ಮನೆಯ ಬಾಗಿಲು ಸ್ವಲ್ಪ ತೆರೆದಿದ್ದುದರಿಂದ ಇಬ್ರಾಹಿಂ ಅವರಿಗೆ ಕರೆ ಮಾಡಿದರು. ಆಗ ವಿಚಾರ ತಿಳಿಸಿದ್ದಾರೆ. ಇಬ್ರಾಹಿಂ ಅವರು ಸಂಜೆ ಮನೆಗೆ ಬಂದು ನೋಡಿದಾಗ ಚಿನ್ನದ ಒಡವೆಗಳು ಮತ್ತು ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here