ವಗ್ಗ : ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕಾವಳಪಡೂರು ಅಂಚೆಕಚೇರಿಗೆ ಭೇಟಿ

0

ಬಂಟ್ವಾಳ: ಸರಕಾರಿ ಪದವಿಪೂರ್ವ ಕಾಲೇಜು ಕಾವಳಪಡೂರು ವಗ್ಗ ಇದರ ಪ್ರೌಢಶಾಲಾ ವಿಭಾಗದ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು ಸಂಸ್ಥೆಯ ವೃತ್ತಿ ಮಾರ್ಗದರ್ಶನ ಸಂಘದ ಅಂಗವಾಗಿ ಕಾವಳಪಡೂರು ಅಂಚೆ ಕಚೇರಿಗೆ ವಿದ್ಯಾರ್ಥಿಗಳು ಫೆ.27ರಂದು ಶಾಲಾ ಅವಧಿಯ ನಂತರ ಭೇಟಿ ನೀಡಿದರು . ಇದರ ಉಸ್ತುವಾರಿಯನ್ನು ಶಾಲೆಯ ಸಮಾಜ ವಿಜ್ಞಾನ ಹಾಗೂ ವೃತ್ತಿ ಮಾರ್ಗದರ್ಶನದ ನೋಡಲ್ ಶಿಕ್ಷಕಿ ಹೆಲೆನ್ ಜೂಲಿಯನ್ ಸಿಕ್ವೇರಾ ವಹಿಸಿದ್ದರು.

ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶೈಲಾಶ್ರೀ ಅವರು ಅಂಚೆ ಕಚೇರಿಯ ವಿವಿಧ ಸೇವೆಗಳಾದ ಹಣದ ವರ್ಗಾವಣೆ, ಆವರ್ತ ಠೇವಣಿ ,ಉಳಿತಾಯ ಪತ್ರ ,ಕಿಸಾನ್ ವಿಕಾಸ ಪತ್ರ ಹಾಗೂ ಇನ್ನಿತರ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ಶಿಕ್ಷಕರಾದ ಶೇಕ್ ಆದಂ ಸಾಹೇಬ್ ನೆಲ್ಯಾಡಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು. ವಿದ್ಯಾರ್ಥಿಗಳು ಅಂಚೆ ಕಚೇರಿಯ ವಿವಿಧ ಕಾರ್ಯಗಳ ಕುರಿತು ಮಾಹಿತಿ ಪಡೆದರು.

LEAVE A REPLY

Please enter your comment!
Please enter your name here