ಬಂಟ್ವಾಳ : ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ- ತಪ್ಪಿದ ಅನಾಹುತ

0

ಬಂಟ್ವಾಳ : ಇಲ್ಲಿನ ಜಕ್ರಿಬೆಟ್ಟು ಸಮೀಪದ ಚಂಡ್ತಿಮಾರ್‌ ನಲ್ಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡು ಅಡುಗೆ ಕೊಣೆ ಮತ್ತು ದಾಸ್ತಾನು ಕೊಠಡಿ ಸಂಪೂರ್ಣ ಸುಟ್ಟುಹೋದ ಘಟನೆ ಮಾ.6ರ ತಡರಾತ್ರಿ ನಡೆದಿದೆ. ಚಂಡ್ತಿಮಾರ್‌ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆಕಷ್ಮಿಕವಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮನೆಯ ಇತರ ಭಾಗಕ್ಕೆ ಬೆಂಕಿ ತಗುಲದೆ ಆಗಬಹುದಾಗಿದ್ದ ಅನಾಹುತವೊಂದು ತಪ್ಪಿದೆ.

LEAVE A REPLY

Please enter your comment!
Please enter your name here