ತಂಜಾವೂರು: ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ಜಾಗತಿಕ ತಮಿಳು ಮಹಾ ಸಂಘಟನೆಯ ಅಧ್ಯಕ್ಷ ಪಿ. ನೆಡುಮಾರನ್ ನೀಡಿದ್ದಾರೆ.
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತನಾಗಿದ್ದು ಆರೋಗ್ಯವಾಗಿದ್ದಾರೆ. ಮಾತ್ರವಲ್ಲ ಶೀಘ್ರದಲ್ಲಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಶ್ರೀಲಂಕಾದ ತಮಿಳು ಸಮುದಾಯಕ್ಕಾಗಿ ಉತ್ತಮ ಯೋಜನೆಯನ್ನು ಘೋಷಿಸಲಿದ್ದಾರೆ.ಎಂದು ನೆಡುಮಾರನ್ ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಮ್ ವರದಿ ಮಾಡಿದೆ.