ಬಂಟ್ವಾಳ:ಇಲ್ಲಿನ ಸೋರ್ಣಾಡು ನಿವಾಸಿ, ಗುತ್ತಿಗೆದಾರ ಜೋಸೆಫ್ ಪಿಂಟೋ ಯಾನೆ ದೂಜ (63) ಇವರು ಹೃದಯಾಘಾತದಿಂದ ಸ್ವಗೃಹದಲ್ಲಿ ಡಿ.14ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರಾಗಿ ವಿವಿಧ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಲೊರೆಟ್ಟೋ ಮಾತಾ ಚರ್ಚಿನಲ್ಲಿ ಡಿ.15ರಂದು ಸಂಜೆ ನೆರವೇರಿತು.