ಭಾರತೀಯ ಕಥೋಲಿಕ ಯುವ ಸಂಚಾಲನ ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಫಾ! ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಬೃಹತ್ ರಕ್ತದಾನ ಶಿಬಿರವು ನ. 13ರಂದು ಅಲ್ಲಿಪಾದೆ ಶಾಲಾ ವಠಾರ ಇಲ್ಲಿ ಬೆ. 8.30ರಿಂದ ಮ-1 ರವರೆಗೆ ನಡೆಯಲಿದೆ.
ಜನರಲ್ ಮೆಡಿಸಿನ್, ಸ್ತ್ರೀ ರೋಗ, ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳು, ಮೂಳೆ ರೋಗ, ದಂತ ಚಿಕಿತ್ಸೆ, ಕಿವಿ,ಮೂಗು, ಗಂಟಲುರೋಗ, ಮುಂತಾದ ಚಿಕೆತ್ಸೆಗಳು
ಶಿಬಿರಾರ್ಥಿಗಳಿಗೆ ಉಚಿತವಾಗಿ ಲಭ್ಯವಿರುವ ಸೇವೆಗಳು :
ಇ.ಸಿ.ಜಿ, ಸಕ್ಕರೆ ಖಾಯಿಲೆ ರಕ್ತ ಪರೀಕ್ಷೆ, ಉಚಿತ ಔಷಧ ವಿತರಣೆ ಇರಲಿದೆ.
ವಿಶೇಷ ಸೂಚನೆ :
ಶಿಭಿರಾರ್ಥಿಗಳಿಗೆ ಕೇವಲ ರೂ.300 ದರದಲ್ಲಿ ಕನ್ನಡಕ ನೀಡಲಾಗುವುದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟನೆ ತಿಳಿಸಿದೆ.