ಪುತ್ತೂರು: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್ )ಅಧ್ಯಕ್ಷರಾಗಿ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಮರು ನೇಮಕಗೊಂಡಿದ್ದಾರೆ. ಈ ಹಿಂದೆ ಎರಡು ವರ್ಷ ಒಂದು ತಿಂಗಳು ಹರಿಕೃಷ್ಣ ಬಂಟ್ವಾಳ್ ಅವರು ಕಿಯೋನಿಕ್ಸ್ ಅಧ್ಯಕ್ಷರಾಗಿದ್ದರು. ಇವರ ಸಹಿತ ಎಲ್ಲಾ ನಿಗಮದ ಅಧ್ಯಕ್ಷರ ಅಧಿಕಾರವನ್ನು ಹಿಂದೆಗೆದುಕೊಂಡಿದ್ದ ರಾಜ್ಯ ಸರ್ಕಾರ ಇದೀಗ ಕಿಯೋನಿಕ್ಸ್ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅವರನ್ನು ಮರು ನೇಮಕ ಮಾಡಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಕಾಯ್ಮಾರು ನಿತ್ಯಾ ಪ್ರಕಾಶ ನಿಲಯದ ನಿವಾಸಿಯಾಗಿರುವ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಹುಟ್ಟೂರಾದ ಪುತ್ತೂರು ಪಡುಮಲೆಯ ಕೋಟಿ ಚೆನ್ನಯ ಕ್ಷೇತ್ರ ಸಂವರ್ಧನಾ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.