ಸಿದ್ಧಕಟ್ಟೆಯ ಪಿಂಕಿ ಟವರ್ಸ್ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಹಾಗೂ ಫ್ಯಾಶನ್ ಡಿಸೈನಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ

0

ಸಿದ್ದಕಟ್ಟೆ : ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಮೊಡಂಕಾಪು ,ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಕೆಪಿಟಿ ಮಂಗಳೂರು,ಸಿಸಿಟೆಕ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಿದ್ಧಕಟ್ಟೆಯ ಪಿಂಕಿ ಟವರ್ಸ್ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಹಾಗೂ ಫ್ಯಾಶನ್ ಡಿಸೈನಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.

ರೋಟರಿ ಝೋನ್ 4 ರ ಅಸಿಸ್ಟೆಂಟ್ ಗವರ್ನರ್ ಎಲಿಯಾಸ್ ಸ್ಯಾಂತಿಸ್ ತರಬೇತಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಝೋನಲ್ ಲೆಫ್ಟಿನೆಂಟ್ ರಾಘವೇಂದ್ರ ಭಟ್, ಇನ್ನರ್ವೀಲ್ ಅಧ್ಯಕ್ಷರಾದ ರಮ್ಯ ವಿಕಾಸ್ ಜೈನ್, ರೋಟರಿ ಲೊರೆಟ್ಟೋ ಅಧ್ಯಕ್ಷರಾದ ಶ್ರುತಿ ಮಾಡ್ತ, ರೋಟರಿ ಹಾಗೂ ಇನ್ನರ್ ವೀಲ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೋಟರಿ ಫಲ್ಗುಣಿಯ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಸ್ವಾಗತಿಸಿ, ಮೈಕೆಲ್ ಡಿಕೋಸ್ತ ವಂದಿಸಿದರು. ವಿದ್ಯಾರ್ಥಿಗಳಾದ ಕೃತಿಕಾ ಶೆಟ್ಟಿ ಹಾಗೂ ಮೋಕ್ಷ ಪ್ರಾರ್ಥನೆಗೈದರು.ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here