ಬಂಟ್ವಾಳ: ಕುಕ್ಕಳ ಗ್ರಾಮದ ಒಳಬೈಲು ನಿವಾಸಿ, ಸರಪಾಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡೀಸ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇವರ ಮನೆಯಿದ್ದು ಮನೆಯ ಕಿಟಕಿ ಮುರಿದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಖದೀಮರು ಸುಮಾರು 25ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿದ್ಧಾರೆ. ಕಬ್ಬಿಣದ ಕಿಟಕಿಯನ್ನು ಕಟ್ಟರ್ ಸಹಾಯದಿಂದ ಮುರಿದು ಮನೆಯೊಳಗಿನ ಕಪಾಟಿನಲ್ಲಿದ್ದ ಸುಮಾರು 1.20ಲಕ್ಷ ಮೌಲ್ಯದ ಎರಡು ಉಂಗುರ, ಎರಡು ಕಿವಿಯೋಲೆಯನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್. ಐ. ಸುತೇಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿ, ಶ್ವಾನದಳ, ಬೆರಳಚ್ಚು ತಜ್ಙರು ಸ್ಥಳಕ್ಕೆ ಕರೆಸಲಾಗಿದೆ.