ಚಿಕ್ಕಮಗಳೂರು: ರಾಷ್ಟ್ರಧ್ವಜವನ್ನು ಸಿಗರೇಟ್ನಿಂದ ಸುಟ್ಟಿದ್ದ ದೇಶದ್ರೋಹಿಯನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಅಸ್ಗರ್(50) ಬಂಧಿತ ಆರೋಪಿ.
ಅಮೃತಮಹೋತ್ಸವ ಅಂಗವಾಗಿ ಮನೆ ಮುಂದೆ ಕಟ್ಟಿದ್ದ ರಾಷ್ಟ್ರಧ್ವಜಕ್ಕೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ನಿವಾಸಿ ಅಸ್ಗರ್ ಸಿಗರೇಟ್ ಸೇದುವಾಗ ಸುಟ್ಟಿದ್ದ. ಸದ್ಯ ರಾಷ್ಟ್ರಧ್ವಜಕ್ಕೆ ಅಪಮಾನದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ರಾಷ್ಟ್ರಧ್ವಜವನ್ನ ಸುಡುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಆತನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.