ಬಂಜೆತನ ಕಾಡುತ್ತಿದೆಯೇ? ಪೆರ್ಲಿಯಾ ನರ್ಸಿಂಗ್ ಹೋಮ್’ನಲ್ಲಿ ಅ.24ರಂದು ಉಚಿತ ಸಂತಾನ ಹೀನತೆ ತಪಾಸಣಾ ಶಿಬಿರ

0

ಬಂಟ್ವಾಳ: ನೋವಾ ಐವಿಎಫ್ ಫರ್ಟಿಲಿಟಿ ಮತ್ತು ಪೆರ್ಲಿಯಾ ನರ್ಸಿಂಗ್ ಹೋಮ್ ಸಹಯೋಗದಲ್ಲಿ ಅ.24ರಂದು ಬಿಸಿ ರೋಡಿನ ಕೈಕಂಬದಲ್ಲಿರುವ ಪೆರ್ಲಿಯಾ ನರ್ಸಿಂಗ್ ಹೋಮ್‌ ನಲ್ಲಿ ಉಚಿತ ಸಂತಾನ ಹೀನತೆ ತಪಸಾಣಾ ಶಿಬಿರ ಆಯೋಜಿಸಲಾಗಿದೆ.


ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಅ‌ನೇಕ‌ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಅಸಾಧ್ಯವಾಗುತ್ತಿದ್ದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದೇ ಇರುವುದು, ಪಿಸಿಒಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್ ನಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಅಥವಾ ವೈದ್ಯರ ಸಲಹೆ ಪಡೆಯಬೇಕೆಂದಿದ್ದವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರ ವರೆಗೆ ಈ ಉಚಿತ ಶಿಬಿರ ಇರಲಿದ್ದು, ಮಹಿಳಾ ಸಲಹೆಗಾರರಾದದ ಡಾ.ಶಮೀಝ್ ಫೈಝಿ ಅವರು ಸಲಹೆ ನೀಡಲಿದ್ದಾರೆ. ನೋಂದಣಿಗಾಗಿ 8105080073, 8792144608, 8296321077 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here