ಕಡೇಶಿವಾಲಯ: ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 2026-2027ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಸು ಪೂಜಾರಿ, ಪ್ರತಾಪನಗರ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಚಂದಪ್ಪ ನಾಯ್ಕ್, ದೆಂತಡ್ಕ, ಕಾರ್ಯದರ್ಶಿಯಾಗಿ ಚಂದ್ರೋದಯ ಕುಲಾಲ್, ಗಾಣದ ಕೊಟ್ಯ, ಜತೆ ಕಾರ್ಯದರ್ಶಿಯಾಗಿ ಸಂಜೀವ ಪೂಜಾರಿ, ದಾಸಕೋಡಿ, ಕೋಶಾಧಿಕಾರಿಯಾಗಿ ಪ್ರದೀಪ್ ಕುಮಾರ್, ಯಂ.ವಿ, ಕ್ರೀಡಾ ಕಾರ್ಯದರ್ಶಿಯಾಗಿ ಪೂವಪ್ಪ ನಾಯ್ಕ್, ಪಿಲಿಂಗಳ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಗುತ್ತಿಗೆ ಆಯ್ಕೆಯಾದರು.
ನಿರ್ದೇಶಕರಾಗಿ ಸಂಘ ಸೇವೆಯಲ್ಲಿ ರಝಕ್, ಪ್ರತಾಪನಗರ, ಆಡಳಿತ ಸೇವೆಯಲ್ಲಿ ಸತೀಶಚಂದ್ರ ಶೆಟ್ಟಿ, ಬಾವಾಗುತ್ತು, ವೃತ್ತಿ ಸೇವೆಯಲ್ಲಿ ಸಿಂಧು, ಅರ್ಥ ವ್ಯವಸ್ಥೆಯಲ್ಲಿ ದಯಾ ಶ್ರೀ, ಕುಂಡಾಜೆ ಆಯ್ಕೆಯಾಗಿದ್ದಾರೆ.ನಿಕಟ ಪೂರ್ವ ಅಧ್ಯಕ್ಷರಾಗಿ ರತ್ನಾಕರ ನಾಯ್ಕ್, ಪ್ರತಾಪನಗರ ಮುಂದುವರಿದಿದ್ದಾರೆ.








