ಬಂಟ್ವಾಳ: ಕರ್ನಾಟಕ ಗಮಕ ಕಲಾ ಪರಿಷತ್ತು ಬಂಟ್ವಾಳ ವಲಯ ಮತ್ತು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಶಂಭೂರು ಭಾಷಾ ಸಂಘದ ಆಶ್ರಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕ ಆಧಾರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ರನ್ನ ಕವಿಯ “ಛಲಮನೆ ಮೆರೆವೆಂ” ಕಾವ್ಯ ಭಾಗವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಅವರು ವಾಚನ ಮಾಡಿದರು. ಇದಕ್ಕೆ ಹೇಮಾ ಮಯ್ಯ ವ್ಯಾಖ್ಯಾನ ನೀಡಿದರು. ಕುಮಾರವ್ಯಾಸ ಕವಿಯ “ಕೌರವೇಂದ್ರನ ಕೊಂದೆ ನೀನು” ಕಾವ್ಯ ಭಾಗವನ್ನು ಪ್ರಚೇತ್ ರಾಮ್ ಕಜೆ ವಾಚನ ಮಾಡಿದರೆ, ಪ್ರತಿಭಾ ಸುಬ್ರಹ್ಮಣ್ಯ ಭಟ್ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಗಮಕ ಕಲಾ ಪರಿಷತ್ ಬಂಟ್ವಾಳ ಘಟಕಾಧ್ಯಕ್ಷ ರವಿಶಂಕರ್ ಮಯ್ಯ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಶಾಂತರಾಮ್ ರಾವ್, ಶ್ರೀದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ಶೇಡಿಗುರಿ ಅಧ್ಯಕ್ಷೆ ಕಲಾವತಿ ಉಪಸ್ಥಿತರಿದ್ದರು.ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ಹರಿಪ್ರಸಾದ್ ವಂದಿಸಿದರು.








