ವಿಟ್ಲ: ಬಸ್ ಡಿಕ್ಕಿ -ವೃದ್ದಗೆ ಗಾಯ

0

ವಿಟ್ಲ: ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಡಿಕ್ಕಿಹೊಡೆದು ವೃದ್ದರೋರ್ವರು ಗಾಯಗೊಂಡ ಘಟನೆ ಆ.6ರಂದು ವಿಟ್ಲದ ಸಂತೆಕಟ್ಟೆ ರಸ್ತೆ ಬಳಿ ನಡೆದಿದೆ.


ಪೆರ್ಲ ಸಮೀಪದ ಎಣ್ಮಕಜೆ ಗ್ರಾಮದ ಬೋಳುಬೈಲು ನಿವಾಸಿ ಸತ್ಯನಾರಾಯಣ ಭಟ್ (76 ವ.) ಗಾಯಗೊಂಡವರು.

ಸತ್ಯನಾರಾಯಣ ಭಟ್ ಅವರು ತಮ್ಮ ಪತ್ನಿಯೊಂದಿಗೆ ಕೊಳ್ನಾಡು ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಲು ವಿಟ್ಲಕ್ಕೆ ಬಂದಿದ್ದರು. ಈ ವೇಳೆ ವಿಟ್ಲದ ಸಂತೆಕಟ್ಟೆ ರಸ್ತೆ ಸಮೀಪದ ಹಣ್ಣಿನ ಅಂಗಡಿಯ ಮುಂದೆ ಹಣ್ಣು ಖರೀದಿಸಲು ನಿಂತಿದ್ದಾಗ, ಕಾಸರಗೋಡಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆಯ ಬಸ್ ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸತ್ಯನಾರಾಯಣ ಭಟ್‌ರವರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಕಬ್ಬಿಣದ ಭಾಗ ಬಡಿದು ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here