ಯೂನಿಕೋಡ್ ಕನ್ವರ್ಷನ್ : ಬಂಟ್ವಾಳ ತಾಲೂಕು ಕಚೇರಿಯಲ್ಲಿ ಆ.17ರವರೆಗೆ ಆರ್‌ಟಿಸಿ ಸೇವೆ ಸ್ಥಗಿತ

0

ಬಂಟ್ವಾಳ: ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಯೂನಿಕೋಡ್ ಕನ್ವರ್ಷನ್ ಕೆಲಸ ಪ್ರಗತಿಯಲ್ಲಿರುವುದರಿಂದ ಆಗಸ್ಟ್ 3 ರಿಂದ 17ರವರೆಗೆ ಯಾವುದೇ ರೀತಿಯ ಆರ್‌ಟಿಸಿ ಮತ್ತು ಮ್ಯುಟೇಶನ್ ಪ್ರತಿಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ತಾಲೂಕು ತಹಶೀಲ್ದಾರ್ ಜಿ. ಮಂಜುನಾಥ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಭೂಮಿ ಶಾಖೆಯಲ್ಲಿ ಆರ್‌ಟಿಸಿ, ಮ್ಯುಟೇಶನ್ ಸೇರಿದಂತೆ ಇತರೆ ಭೂ ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳು ಸಂಪೂರ್ಣವಾಗಿ ಅಲಭ್ಯವಾಗಿರಲಿವೆ. ಆ.17ರ ನಂತರ ಯೂನಿಕೋಡ್ ಕನ್ವರ್ಷನ್ ಪೂರ್ಣಗೊಂಡ ಬಳಿಕ ಎಲ್ಲಾ ಸೇವೆಗಳು ಪುನರಾರಂಭಗೊಳ್ಳಲಿವೆ. ಸಾರ್ವಜನಿಕರು ಸಹಕರಿಸುವಂತೆ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here