ಪುತ್ತೂರು : ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ದಿ.ಸುಬ್ಬಣ್ಣ ಗೌಡರ ಪತ್ನಿ ಭವಾನಿ(70ವ.)ರವರು ವಯೋಸಹಜ ಅಸೌಖ್ಯದಿಂದ ಆ.7ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಜಯರಾಮ ಗೌಡ, ಸೊಸೆ ಲತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಮೃತರ ಮನೆಗೆ ಡಾ.ಸುಬ್ರಹ್ಮಣ್ಯ ಭಟ್ ಪದ್ಯಾಣ, ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಉದ್ಯೋಗಿ ರಾಮಕೃಷ್ಣ ಭಟ್ ಪದ್ಯಾಣ, ಪದ್ಯಾಣ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಸತ್ಯನಾರಾಯಣ ಭಟ್ ಪದ್ಯಾಣ, ಕರೋಪಾಡಿ ಗ್ರಾ.ಪಂ.ಮಾಜಿ ಸದಸ್ಯ ಸುನಿಲ್ ಪದ್ಯಾಣ ಸೇರಿದಂತೆ ಹಲವರು ಆಗಮಿಸಿದ್ದರು.









