ವಿಟ್ಲ: ನೀಟ್ ಹೋರಾಟವನ್ನು ಧಾರ್ಮಿಕವಾಗಿ ಥಳುಕು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಕೇಪು ನಿವಾಸಿ ಭರತ್ (36 ವ.)ಬಂಧಿತ ಆರೋಪಿ.
ಕೆ.ಎಫ್.ಸಿ. ಕನ್ನಡಿಗ ಎನ್ನುವ ವಾಟ್ಯಾಪ್ ಗ್ರೂಪ್ ನಲ್ಲಿ ಜು.23ರಂದು ನೀಟ್ ಹೊರಾಟವನ್ನು ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಮಾಡಿರುವುದು ಮಾತ್ರವಲ್ಲದೆ ಸಾರ್ವಜನಿಕವಾಗಿ ನೆಮ್ಮದಿಗೆ ಭಂಗವುಂಟು ಮಾಡಿರುವ ಆರೋಪದಲ್ಲಿ ಅದೇ ವಾಟ್ಸ್ಯಾಪ್ ಗ್ರೂಪ್ ನ ಸದಸ್ಯರೋರ್ವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ.








