ಪ್ರಾಮಾಣಿಕ ಸೇವೆ ಬ್ಯಾಂಕ್-ಗ್ರಾಹಕ ಸಂಬಂಧ ಗಟ್ಟಿಗೊಳಿಸುತ್ತದೆ: ಪ್ರಭಾಕರ ಪ್ರಭು
ಬಂಟ್ವಾಳ: ಹಣಕಾಸು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸುತ್ತದೆ. ಇದರಿಂದ ಗ್ರಾಹಕರು ಬ್ಯಾಂಕ್ನೊಂದಿಗೆ ಮತ್ತಷ್ಟು ಸಂಬಂಧ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿದ್ದಕಟ್ಟೆ ಶಾಖೆಯ ವರ್ಗಾವಣೆಗೊಂಡ ಶಾಖಾಧಿಕಾರಿ ರಘುಪ್ರಸಾದ್ ಹಾಗೂ ಸಿಬ್ಬಂದಿ ಸ್ಮಿತಾ ಅವರಿಗೆ ಗೌರವಿಸಿ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ವರ್ಗಾವಣೆಗೊಂಡ ಬ್ಯಾಂಕ್ ಮ್ಯಾನೇಜರ್ ರಘುಪ್ರಸಾದ್ ಮಾತನಾಡಿ, “ಸಿದ್ದಕಟ್ಟೆ ಪರಿಸರದ ಗ್ರಾಹಕರು ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸದಾಯಕರು. ಇಲ್ಲಿನ ವಾತಾವರಣವು ಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿದೆ” ಎಂದರು.
ಸಮಾರಂಭದಲ್ಲಿ ಸ್ವಾಗತ ಕಾಂಪ್ಲೆಕ್ಸ್ ಮಾಲಕ ಹರೀಶ್ ಶೆಟ್ಟಿ, ಬ್ಯಾಂಕ್ ಸಿಬ್ಬಂದಿ ಮಂಜುನಾಥ್, ಪದ್ಮಾವತಿ, ಉದ್ಯಮಿಗಳಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಯೋಗೀಶ್ ಶೆಟ್ಟಿಗಾರ್, ಪ್ರಮುಖರಾದ ಸಂತೋಷ, ಕೇಶವ ಶಭರೀಶ, ಪ್ರಕಾಶ್ ಶೆಟ್ಟಿ, ಗಣೇಶ್ ಹೊಳ್ಳ, ಸಂದ್ಯಾ ವಾರಿಜ, ಮೀನಾಕ್ಷಿ ಸೇರಿದಂತೆ ಹಲವು ಗ್ರಾಹಕರು ಉಪಸ್ಥಿತರಿದ್ದರು.








